ದೇರಳಕಟ್ಟೆ: ಸರಕಾರದ ವಿರುದ್ಧ ಡಿವೈಎಫ್ಐ ಪ್ರತಿಭಟನೆ

Update: 2020-08-25 09:55 GMT

ದೇರಳಕಟ್ಟೆ, ಆ.25: ಸರಕಾರಿ ಆಸ್ಪತ್ರೆ ಬಲಪಡಿಸಿರಿ, ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಿಸಿ, ಜಿಲ್ಲೆಯಲ್ಲಿ ಸರಕಾರಿ ಮೆಡಿಕಲ್ ಕಾಲೇಜ್ ಸ್ಥಾಪಿಸಿರಿ, ಕೋವಿಡ್ ರೋಗಿಗಳಿಗೆ ಉಚಿತ ಗುಣಮಟ್ಟದ ಚಿಕಿತ್ಸೆ ನೀಡಿ, ಕೋವಿಡ್ ಭ್ರಷ್ಟಾಚಾರದ ತನಿಖೆ ಮಾಡಿ, ಖಾಸಗಿ ಆಸ್ಪತ್ರೆಗಳ ಲೂಟಿಕೋರ ನೀತಿಗೆ ತಡೆ ನೀಡುವಂತೆ ಒತ್ತಾಯಿಸಿ ಡಿವೈಎಫ್ಐ ಉಳ್ಳಾಲ ವಲಯ ಸಮಿತಿ ವತಿಯಿಂದ ಪ್ರತಿಭಟನಾ ಪ್ರದರ್ಶನ ದೇರಳೆಕಟ್ಟೆ ಜಂಕ್ಷನ್ ನಲ್ಲಿ ನಡೆಯಿತು.

ಡಿವೈಎಫ್ಐ ಜಿಲ್ಲಾ ಅಧ್ಯಕ್ಷ ಬಿ.ಕೆ.ಇಮ್ತಿಯಾಝ್ ಮಾತನಾಡಿ, ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ದಾಖಲಾದವರಲ್ಲಿ ಲಕ್ಷಾಂತರ ಹಣ ಸುಲಿಗೆ ಮಾಡುತ್ತಿದ್ದಾರೆ, ಸರಕಾರ ಜನಪರವಾಗಿರದೆ ಜನವಿರೋದಿಯಾಗಿದೆ ಎಂದರು.

ವಕೀಲ ನಿತಿನ್ ಕುತ್ತಾರ್ ಮಾತನಾಡಿ ಸೇವಾ ಮನೋಭಾವದಿಂದ ಆರಂಬಿಸಿದ ಶಿಕ್ಷಣ ಸಂಸ್ಥೆಯೂ ಕೊರೋನದ ಹೆಸರಲ್ಲಿ ಹಣಮಾಡುತ್ತಿದೆ. ಸರಕಾರ ಆರೋಗ್ಯ ಕ್ಷೇತ್ರವನ್ನು ಖಾಸಗಿ ತೆಕ್ಕೆಯಿಂದ ತೆಗೆದು ತನ್ನ ತೆಕ್ಕೆಯಲ್ಲಿ ಇರಿಸಿದರೆ ಸಾವಿನ ಸಂಖ್ಯೆ ಕಡಿಮೆಯಾಗಬಹುದು ಎಂದರು.

ಡಿವೈಎಫ್ಐ ಉಳ್ಳಾಲ ವಲಯ ಅಧ್ಯಕ್ಷ ಅಶ್ರಫ್ ಮಾತನಾಡಿದರು.

ಡಿವೈಎಫ್ಐ ಉಳ್ಳಾಲ ವಲಯ ಉಪಾಧ್ಯಕ್ಷ ಜೀವನ್ ರಾಜ್ ಕುತ್ತಾರ್, ರಝಾಕ್ ಮೊಂಟೆಪದವು, ಕಾರ್ಯದರ್ಶಿ ಸುನೀಲ್ ತೇವುಲ, ಸಿಪಿಎಂ ಜಿಲ್ಲಾ ಸಮಿತಿಯ ಸದಸ್ಯರಾದ ಜಯಂತ್ ನಾಯಕ್, ಮುಖಂಡ ಮಹಾಬಲ ದೆಪ್ಪೆಲಿಮಾರ್, ಡಿವೈಎಫ್ಐ ದೇರಳೆಕಟ್ಟೆ ಅಧ್ಯಕ್ಷ ನವಾಝ್, ರಾಣಿ ಅಬ್ಬಕ್ಕ ಬಸ್ಸು ನೌಕರರ ಸಂಘದ ಕಾರ್ಯದರ್ಶಿ ಜಗದೀಶ್, ಎಸ್ಎಫ್ಐ ಜಿಲ್ಲಾ ಉಪಾಧ್ಯಕ್ಷ ಶಮಾಝ್, ಡಿವೈಎಫ್ಐ ಜಿಲ್ಲಾ ಉಪಾಧ್ಯಕ್ಷ ರಫೀಕ್ ಹರೇಕಳ, ಸಿಪಿಎಂ ಅಂಬ್ಲಮೊಗರು ಘಟಕದ ಶಾಖಾ ಕಾರ್ಯದರ್ಶಿ ಇಬ್ರಾಹೀಂ ಮದಕ, ಹರೇಕಳ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಅಶ್ರಫ್ ಹರೇಕಳ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News