ಪಂಜಾಬಿನ 23 ಶಾಸಕರಿಗೆ ಕೊರೋನ ಸೋಂಕು: ಸಿಎಂ ಅಮರಿಂದರ್ ಸಿಂಗ್

Update: 2020-08-26 16:10 GMT

ಚಂಡಿಗಡ,ಆ.27: ಗುರುವಾರ ನಡೆಯಲಿರುವ ರಾಜ್ಯ ವಿಧಾನಸಭೆಯ ಒಂದು ದಿನದ ಅಧಿವೇಶನಕ್ಕೆ ಮುನ್ನ ಸರಕಾರವು ಎಲ್ಲ ಶಾಸಕರನ್ನು ತಪಾಸಣೆಗೊಳಪಡಿಸಿದ್ದು,ಈವರೆಗೆ 117 ಶಾಸಕರ ಪೈಕಿ 23 ಜನರಲ್ಲಿ ಕೊರೋನ ವೈರಸ್ ಸೋಂಕು ಪತ್ತೆಯಾಗಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು ಬುಧವಾರ ಇಲ್ಲಿ ತಿಳಿಸಿದರು.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಜೊತೆ ಏಳು ಎನ್‌ಡಿಎಯೇತರ ಮುಖ್ಯಮಂತ್ರಿಗಳ ವೀಡಿಯೊ ಕಾನ್ಫರೆನ್ಸ್‌ನಲ್ಲಿ ಪಾಲ್ಗೊಂಡಿದ್ದ ಸಿಂಗ್,ಅಧಿವೇಶನದಲ್ಲಿ ಹಾಜರಾಗಲು ಸದನವನ್ನು ಪ್ರವೇಶಿಸುವ ಮುನ್ನ ತಮ್ಮ ಕೋವಿಡ್-19 ನೆಗೆಟಿವ್ ವರದಿಯನ್ನು ಜೊತೆಯಲ್ಲಿ ಹೊಂದಿರುವಂತೆ ಎಲ್ಲ ಶಾಸಕರಿಗೆ ಸೂಚಿಸಲಾಗಿದೆ. ಕೊರೋನ ವೈರಸ್ ವಿಷಯದಲ್ಲಿ ಶಾಸಕರು ಮತ್ತು ಸಚಿವರದ್ದೇ ಈ ಸ್ಥಿತಿಯಾಗಿದ್ದರೆ ತಳಮಟ್ಟದಲ್ಲಿ ಸ್ಥಿತಿ ಎಷ್ಟು ಘೋರವಾಗಿದೆ ಎನ್ನುವುದನ್ನು ಊಹಿಸಬಹುದು ಎಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News