×
Ad

ಪ್ರಣವ್ ಮುಖರ್ಜಿ ಕೋಮಾ ಸ್ಥಿತಿ ಮುಂದುವರಿಕೆ

Update: 2020-08-26 22:44 IST

ಹೊಸದಿಲ್ಲಿ, ಆ. 26: ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರ ಕೋಮಾ ಸ್ಥಿತಿ ಮುಂದುವರಿದಿದೆ. ಅವರ ಮೂತ್ರಪಿಂಡದ ನಿಯತಾಂಕಗಳು ಸ್ವಲ್ಪ ದುರ್ಬಲಗೊಂಡಿದೆ ಎಂದು ಅವರಿಗೆ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆ ಬುಧವಾರ ತಿಳಿಸಿದೆ.

ಅವರಿಗೆ ನೀಡಲಾದ ವೆಂಟಿಲೇಟರ್ ವ್ಯವಸ್ಥೆ ಮುಂದುವರಿಸಲಾಗಿದೆ ಎಂದು 84 ವರ್ಷ ಪ್ರಾಯದ ಪ್ರಣವ್ ಮುಖರ್ಜಿ ಅವರನ್ನು ನೋಡಿಕೊಳ್ಳುತ್ತಿರುವ ವೈದ್ಯರು ತಿಳಿಸಿದ್ದಾರೆ. ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿರುವುದನ್ನು ಶಸ್ತ್ರಚಿಕಿತ್ಸೆ ನಡೆಸಿ ತೆಗೆಯಲು ಪ್ರಣವ್ ಮುಖರ್ಜಿ ಅವರನ್ನು ದಿಲ್ಲಿ ಕಂಟೋನ್ಮೆಂಟ್‌ನ ಆರ್ಮಿ ರಿಸರ್ಚ್ ಆ್ಯಂಡ್ ರೆಪರಲ್ ಆಸ್ಪತ್ರೆಗೆ ಆಗಸ್ಟ್ 10ರಂದು ದಾಖಲಿಸಲಾಗಿತ್ತು. ಅನಂತರ ಅವರಿಗೆ ಶ್ವಾಸಕೋಸದ ಸೋಂಕು ಕಾಣಿಸಿಕೊಂಡಿತ್ತು. ಅದಕ್ಕೆ ಕೂಡ ಚಿಕಿತ್ಸೆ ನೀಡಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News