ಜಮಾಅತೇ ಇಸ್ಲಾಮಿ ಹಿಂದ್‌ನಿಂದ ಉಸ್ತಾದ್‌ಗಳಿಗೆ ದಿನಸಿ ಕಿಟ್ ವಿತರಣೆ

Update: 2020-08-27 07:01 GMT

ಮಂಗಳೂರು, ಆ.27: ಲಾಕ್‌ಡೌನ್, ಕೊರೋನ ಹಾವಳಿಯಿಂದ ಕಳೆದ ಐದಾರು ತಿಂಗಳುಗಳಿಂದ ಉದ್ಯೋಗವಿಲ್ಲದೆ ಸಂಕಷ್ಟಕ್ಕೆ ಒಳಗಾಗಿರುವ ಮಸೀದಿ-ಮದ್ರಸಗಳ ಉಸ್ತಾದರುಗಳಿಗೆ ಜಮಾಅತೇ ಇಸ್ಲಾಮೀ ಹಿಂದ್‌ನ ಸಮಾಜ ಸೇವಾ ಘಟಕದ ವತಿಯಿಂದ ದಿನಸಿ ಸಾಮಗ್ರಿಗಳ ಕಿಟ್‌ಗಳನ್ನು ವಿತರಿಸಲಾಯಿತು.

ಬೋಳಂಗಡಿ ಹವ್ವಾ ಜುಮಾ ಮಸೀದಿಯ ಖತೀಬ್ ಮೌಲಾನ ಯಹ್ಯಾ ತಂಙಳ್ ಮದನಿ ನೇತೃತ್ವದಲ್ಲಿ ಸುಮಾರು ಮೂವತ್ತೆಂಟು ಕುಟುಂಬಗಳಿಗೆ ತಲಾ ಎರಡು ಸಾವಿರ ರೂ. ಮೌಲ್ಯದ ಕಿಟ್‌ಗಳನ್ನು ಉಸ್ತಾದ್‌ರುಗಳ ಮನೆಗಳಿಗೆ ತಲುಪಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News