ಪುಣೆ ಆಸ್ಪತ್ರೆಯಲ್ಲಿ ಆಕ್ಸ್‌ಫರ್ಡ್ ಕೋವಿಡ್ ಲಸಿಕೆ ಸೇವಿಸಿದವರ ಆರೋಗ್ಯ ಸ್ಥಿರ : ವರದಿ

Update: 2020-08-27 13:10 GMT
ಸಾಂದರ್ಭಿಕ ಚಿತ್ರ

ಪುಣೆ, ಆ.27: ಆಕ್ಸ್‌ಫರ್ಡ್ ಕೋವಿಡ್ ಲಸಿಕೆಯ ಎರಡನೇ ಹಂತದ ವೈದ್ಯಕೀಯ ಪ್ರಯೋಗದ ಅಂಗವಾಗಿ ಪುಣೆ ಮೂಲದ ಆಸ್ಪತ್ರೆಯಲ್ಲಿ ಲಸಿಕೆ ಸೇವಿಸಿದ ಇಬ್ಬರು ಸ್ವಯಂಸೇವಕರ ಆರೋಗ್ಯ ಸ್ಥಿರವಾಗಿದೆ. ಗುರುವಾರ ಇನ್ನೂ ಮೂರು ಅಭ್ಯರ್ಥಿಗಳಿಗೆ ಲಸಿಕೆ ನೀಡಲಾಗಿದೆ ಎಂದು ವರದಿ ತಿಳಿಸಿದೆ.

ಭಾರ್ತಿ ವಿದ್ಯಾಪೀಠ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಈ ಲಸಿಕೆಯನ್ನು ಸೇವಿಸಿದ 32 ಮತ್ತು 48 ವರ್ಷದ ಇಬ್ಬರು ವ್ಯಕ್ತಿಗಳಿಗೂ 24 ಗಂಟೆಗಳ ಬಳಿಕವೂ ಆರೋಗ್ಯದಲ್ಲಿ ಯಾವುದೇ ಸಮಸ್ಯೆಯಾಗಿಲ್ಲ. ಆಕ್ಸ್‌ಫರ್ಡ್‌ನ ಲೈಸೆನ್ಸ್ ಪಡೆದು ಪುಣೆ ಮೂಲದ ಸೆರಮ್ ಇನ್ಸ್‌ಟಿಟ್ಯೂಟ್ ಆಫ್ ಇಂಡಿಯಾ(ಎಸ್‌ಐಐ)ದಲ್ಲಿ ತಯಾರಿಸಲಾಗಿರುವ ಕೊವಿಶೀಲ್ಡ್ ಎಂಬ ಹೆಸರಿನ ಲಸಿಕೆಯನ್ನು ಗುರುವಾರ ಇಬ್ಬರು ಮಹಿಳೆಯರು ಹಾಗೂ ಒಬ್ಬ ಪುರುಷರಿಗೆ ನೀಡಲಾಗಿದ್ದು ಇವರ ಆರೋಗ್ಯಸ್ಥಿತಿಯ ಮೇಲೆ ನಿಗಾ ಇರಿಸಲಾಗಿದೆ .

ಲಸಿಕೆ ಸೇವಿಸಿದ ತಕ್ಷಣವೇ ಐವರಿಗೂ ಮನೆಗೆ ತೆರಳಲು ಅವಕಾಶ ನೀಡಲಾಗಿದೆ. ಇವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಒಂದು ತಿಂಗಳ ಬಳಿಕ ಮೂರನೇ ಹಂತದ ಪ್ರಯೋಗ ನಡೆಸಲಾಗುವುದು ಎಂದು ಆಸ್ಪತ್ರೆಯ ಉಪ ವೈದ್ಯಕೀಯ ನಿರ್ದೇಶಕ ಡಾ ಜಿತೇಂದ್ರ ಓಸ್ವಾಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News