×
Ad

ನೆಟ್‌ಫ್ಲಿಕ್ಸ್ ಶೋ ‘ಬ್ಯಾಡ್ ಬಾಯ್ ಬಿಲಿಯನೇರ್ಸ್’ನ ಪೂರ್ವವೀಕ್ಷಣೆ ಕೋರಿದ್ದ ಮೆಹುಲ್ ಚೋಕ್ಸಿ ಅರ್ಜಿ ವಜಾ

Update: 2020-08-28 19:49 IST

 ಹೊಸದಿಲ್ಲಿ,ಆ.28: ನೆಟ್‌ಫ್ಲಿಕ್ಸ್‌ನ ಮುಂಬರುವ ವೆಬ್ ಸರಣಿ ‘ಬ್ಯಾಡ್ ಬಾಯ್ ಬಿಲಿಯನೇರ್ಸ್ ’ ಸೆ.2ಕ್ಕೆ ಬಿಡುಗಡೆಗೊಳ್ಳುವ ಮುನ್ನ ಅದರ ಪೂರ್ವವೀಕ್ಷಣೆಯನ್ನು ಕೋರಿ ದೇಶಭ್ರಷ್ಟ ವಜ್ರಾಭರಣ ಉದ್ಯಮಿ ಮೆಹುಲ್ ಚೋಕ್ಸಿ ಸಲ್ಲಿಸಿದ್ದ ಅರ್ಜಿಯನ್ನು ದಿಲ್ಲಿ ಉಚ್ಚ ನ್ಯಾಯಾಲಯವು ಶುಕ್ರವಾರ ವಜಾಗೊಳಿಸಿದೆ.

ವೆಬ್ ಸರಣಿಯು ಚೋಕ್ಸಿ ಮತ್ತು ಸೋದರಳಿಯ ನೀರವ್ ಮೋದಿ ವಿರುದ್ಧ ನಡೆಯುತ್ತಿರುವ ತನಿಖೆಯ ಮೇಲೆ ಪರಿಣಾಮವನ್ನು ಬೀರಬಹುದು ಎಂದು ಬುಧವಾರದ ವಿಚಾರಣೆ ಸಂದರ್ಭ ವಾದಿಸಿದ್ದ ಚೋಕ್ಸಿ ಪರ ವಕೀಲ ವಿಜಯ ಅಗರವಾಲ್ ಅವರು,ಇದೇ ಕಾರಣದಿಂದ ಈ ಸರಣಿಯನ್ನು ಬಿಡುಗಡೆಗೊಳಿಸದಂತೆ ನೆಟ್‌ಫ್ಲಿಕ್ಸ್‌ನ್ನು ನಿರ್ಬಂಧಿಸುವಂತೆ ಅರ್ಜಿಯಲ್ಲಿ ಕೋರಲಾಗಿದೆ ಎಂದು ತಿಳಿಸಿದ್ದರು.

ಚೋಕ್ಸಿ ಮತ್ತು ಮೋದಿ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 13,000 ಕೋ.ರೂ.ಹೆಚ್ಚಿನ ಮೊತ್ತವನ್ನು ವಂಚಿಸಿರುವ ಆರೋಪಿಗಳಾಗಿದ್ದಾರೆ.

ಕಾರ್ಯಕ್ರಮಗಳ ವಿಷಯಗಳನ್ನು ನಿಯಂತ್ರಿಸುವ ನಿಯಮಗಳನ್ನು ನೆಟ್‌ಫ್ಲಿಕ್ಸ್ ಹೊಂದಿಲ್ಲ ಎಂದು ಶುಕ್ರವಾರ ತಿಳಿಸಿದ ಉಚ್ಚ ನ್ಯಾಯಾಲಯವು,ಚೋಕ್ಸಿ ಸಿವಿಲ್ ಮೊಕದ್ದಮೆಯನ್ನು ದಾಖಲಿಸಬಹುದು ಎಂದು ತಿಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News