ಬಾರ್ಸಿಲೋನದ ತರಬೇತಿ ಶಿಬಿರದಿಂದ ಮೆಸ್ಸಿ ದೂರ

Update: 2020-08-30 17:56 GMT

ಮ್ಯಾಡ್ರಿಡ್, ಆ.30: ವಾರದ ಹಿಂದೆ ಬಾರ್ಸಿಲೋನ ತಂಡವನ್ನು ತೊರೆಯುವ ಇಂಗಿತ ವ್ಯಕ್ತಪಡಿಸಿದ್ದ ಸ್ಟಾರ್ ಆಟಗಾರ ಲಿಯೋನೆಲ್ ಮೆಸ್ಸಿ ಸೋಮವಾರ ತರಬೇತಿ ಶಿಬಿರದಲ್ಲಿ ಭಾಗವಹಿಸುವ ಸಾಧ್ಯತೆ ಇಲ್ಲ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಹೊಸ ಕೋಚ್ ರೊನಾಲ್ಡ್ ಕೋಮನ್ ಅವರ ನೇತೃತ್ವದ ಮೊದಲ ತರಬೇತಿಗಾಗಿ ತಂಡದ ಸಹ ಆಟಗಾರರೊಂದಿಗೆ ಸೇರಿಕೊಳ್ಳದಿರುವ ನಿರ್ಧಾರವನ್ನು ಮೆಸ್ಸಿ ತಿಳಿಸಿದ್ದಾರೆ ಎನ್ನಲಾಗಿದೆ.

ಮೆಸ್ಸಿ ಮಂಗಳವಾರ ಕ್ಲಬ್‌ಗೆ ಮಾಹಿತಿ ನೀಡಿದ್ದು, ಅವರು ತಕ್ಷಣವೇ ಹೊರಹೋಗಲು ಇಚ್ಛಿಸಿದ್ದಾರೆ. ಬೇಯರ್ನ್ ಮ್ಯೂನಿಚ್ ವಿರುದ್ಧ ಚಾಂಪಿಯನ್ಸ್ ಲೀಗ್‌ನಲ್ಲಿ 2-8 ಅಂತರದಲ್ಲಿ ಹೀನಾಯ ಸೋಲಿನ ಎರಡು ವಾರಗಳ ನಂತರ ಮೆಸ್ಸಿ ಬಾರ್ಸಿಲೋಕ್ಕೆ ಆಘಾತ ನೀಡಿದ್ದಾರೆ.

  ಮಾಧ್ಯಮಗಳ ಪ್ರಕಾರ ಮೆಸ್ಸಿ ಒಪ್ಪಂದ ಕೊನೆಗೊಂಡಿದೆ. ಕ್ಲಬ್‌ನಿಂದ ಹೊರಹೋಗುವ ಇಚ್ಛೆಯನ್ನು ಈಗಾಗಲೇ ವ್ಯಕ್ತಪಡಿಸಿರುವುದರಿಂದ ಮೆಸ್ಸಿ ತರಬೇತಿಗೆ ಹಾಜರಾಗುವ ಅಗತ್ಯವಿಲ್ಲ ಎಂದು ಮೆಸ್ಸಿ ವಕೀಲರು ಹೇಳಿರುವುದಾಗಿ ವರದಿ ತಿಳಿಸಿದೆ.

 2017ರಲ್ಲಿ ಸಹಿ ಮಾಡಿದ ನಾಲ್ಕು ವರ್ಷಗಳ ಒಪ್ಪಂದ 2021ಕ್ಕೆ ಕೊನೆಗೊಳ್ಳುತ್ತದೆ. ಆದರೆ ಜೂನ್ 10ರೊಳಗೆ ವಿನಂತಿಸಿದ್ದರೆ ಕ್ಲಬ್‌ನ್ನು ಉಚಿತವಾಗಿ ಬಿಡಲು ಮೆಸ್ಸಿಗೆ ಅವಕಾಶವಿತ್ತು.

2021ರಲ್ಲಿ ಮುಕ್ತಾಯಗೊಳ್ಳುವ ಒಪ್ಪಂದದ ನಿಯಮಗಳ ಪ್ರಕಾರ ಕ್ಲಬ್‌ಗೆ ಒಪ್ಪಿಗೆಯಿಲ್ಲದೆ ಮೆಸ್ಸಿ ಹೊರಡುವ ಏಕೈಕ ಮಾರ್ಗವೆಂದರೆ ಪ್ರತಿಸ್ಪರ್ಧಿ ತಂಡವು ತನ್ನ ಬಿಡುಗಡೆ ಷರತ್ತು 700 ಮಿಲಿಯನ್ ಯುರೋಗಳಷ್ಟು (833 ಮಿಲಿಯನ್‌ಡಾಲರ್) ಪಾವತಿಸಬೇಕು.

 ಮ್ಯಾಂಚೆಸ್ಟರ್ ಸಿಟಿ, ಪಿಎಸ್‌ಜಿ ಮತ್ತು ಇಂಟರ್ ಮಿಲಾನ್ ಈ ತಂಡಗಳಲ್ಲಿ ಯಾವುದಾದರೂ ಒಂದು ತಂಡದಲ್ಲಿ ಮೆಸ್ಸಿ ಸೇರಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News