ಏಮ್ಸ್ ಆಸ್ಪತ್ರೆಯಿಂದ ಅಮಿತ್ ಶಾ ಬಿಡುಗಡೆ

Update: 2020-08-31 04:26 GMT

ಹೊಸದಿಲ್ಲಿ, ಆ.31: ಕೋವಿಡ್-19ನಿಂದ ಚೇತರಿಸಿಕೊಂಡ ಬಳಿಕ ದಣಿವು ಹಾಗೂ ಮೈಕೈ ನೋವಿನ ಕಾರಣಕ್ಕೆ ದಿಲ್ಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ ಬೆಳಗ್ಗೆ ಆಸ್ಪತ್ರೆಯಿಂದ ಬಿಡುಗಡೆಯಾದರು.

55ರ ವಯಸ್ಸಿನ ಬಿಜೆಪಿಯ ಹಿರಿಯ ನಾಯಕನಿಗೆ ಆಗಸ್ಟ್ 2ರಂದು ಕೊರೋನ ದೃಢಪಟ್ಟಿತ್ತು.

ಕೇಂದ್ರ ಗೃಹ ಸಚಿವ ಅಮಿತ್ ಶಾ ಕೋವಿಡ್ ನಂತರದ ಚಿಕಿತ್ಸೆಗಾಗಿ ಹೊಸದಿಲ್ಲಿಯ ಏಮ್ಸ್‌ಗೆ ದಾಖಲಾಗಿದ್ದಾರೆ.ಇದೀಗ ಅಮಿತ್ ಶಾ ಚೇತರಿಸಿಕೊಂಡಿದ್ದಾರೆ.ಶೀಘ್ರವೇ ಆಸ್ಪತ್ರೆಯಿಂದ ಬಿಡುಗಡೆಯಾಗುವ ಸಾಧ್ಯತೆಯಿದೆ ಎಂದು ಏಮ್ಸ್ ಆಸ್ಪತ್ರೆ ಶನಿವಾರ ಹೇಳಿಕೆಯೊಂದರಲ್ಲಿ ತಿಳಿಸಿತ್ತು.

ಅಮಿತ್ ಶಾ ದಣಿವು ಹಾಗೂ ಮೈಕೈ ನೋವಿನ ಕಾರಣದಿಂದ ಆಗಸ್ಟ್ 18 ರಂದು ಏಮ್ಸ್‌ಗೆ ದಾಖಲಾಗಿದ್ದರು. ಆಗಸ್ಟ್ 2ರಂದು ಕೊರೋನವೈರಸ್ ಸೋಂಕು ತಗಲಿರುವುದು ದೃಢಪಟ್ಟ ತಕ್ಷಣ ಅಮಿತ್ ಶಾ ಗುರುಗ್ರಾಮದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.

ವೈದ್ಯರ ಸಲಹೆಯ ಮೇರೆಗೆ ಇನ್ನೂ ಕೆಲವು ದಿನಗಳ ಕಾಲ ಮನೆಯಲ್ಲಿ ಐಸೋಲೇಶನ್‌ನಲ್ಲಿ ಇರುವುದಾಗಿ ಆಗಸ್ಟ್ 14 ರಂದು ಅಮಿತ್ ಶಾ ಟ್ವೀಟ್ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News