ಮಹಿಳೆಯರು ಸಂಜೀವಿನಿ ಯೋಜನೆ ಪ್ರಯೋಜನ ಪಡೆಯಬೇಕು: ದಿನಕರ ಬಾಬು

Update: 2020-09-01 12:39 GMT

ಉಡುಪಿ, ಸೆ.1:ಸಂಜೀವಿನಿ ಯೋಜನೆಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ವಿಶೇಷ ಮಹತ್ವ ನೀಡುತ್ತಿದ್ದು, ಸಂಜೀವಿನಿ ಯೋಜನೆಯ ಮೂಲಕ ಕೌಶಲ್ಯಾಭಿವೃದ್ಧಿ ಮತ್ತು ಜನರ ಜೀವನದ ಮಟ್ಟವನ್ನು ಹೆಚ್ಚಿಸುವುದು ಪ್ರಧಾನ ಮಂತ್ರಿಗಳ ಆಶಯವೂ ಆಗಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಮಹಿಳೆಯರು ಯೋಜನೆಯ ಸದುಪಯೋಗಪಡಿಸಿಕೊಂಡು ಮಾದರಿ ಒಕ್ಕೂಟಗಳನ್ನು ರಚಿಸುವಂತೆ ಉಡುಪಿ ಜಿಪಂ ಅಧ್ಯಕ್ಷ ದಿನಕರಬಾಬು ಕರೆ ಕೊಟ್ಟಿದ್ದಾರೆ.

ಸೋಮವಾರ ಅಲೆವೂರು ಗ್ರಾಪಂ ಮಟ್ಟದ ಒಕ್ಕೂಟ ರಚನೆಯ ಉದ್ಘಾಟನೆ ನೆರವೇರಿಸಿ ಅವರು ಮಾತನಾಡುತಿದ್ದರು. ಲಾಭಯುತ ಆದಾಯವನ್ನು ಒದಗಿಸುವ ಮೂಲಕ ಬಡತನದ ತೀವ್ರತೆಯನ್ನು ಕಡಿಮೆಗೊಳಿಸುವುದು ಮತ್ತು ಸಮುದಾಯ ಸಂಸ್ಥೆಗಳ ಮೂಲಕ ಸ್ವ-ಉದ್ಯೋಗದ ಅವಕಾಶಗಳನ್ನು ಕಲ್ಪಿಸುವು ದರಿಂದ ಗ್ರಾಮೀಣ ಜನರ ಜೀವನಮಟ್ಟವನ್ನು ಅಭಿವೃದ್ಧಿ ಪಡಿಸುವುದು ಸಂಜೀವಿನಿ ಯೋಜನೆಯ ಧ್ಯೇಯ ಎಂದವರು ನುಡಿದರು.

ಕಾರ್ಯಕ್ರಮದಲ್ಲಿ ಉಡುಪಿ ತಾಪಂ ಸದಸ್ಯೆ ಬೇಬಿ ರಾಜೇಶ್, ಮಾಜಿ ಅಧ್ಯಕ್ಷ ಶ್ರೀಕಾಂತ ನಾಯಕ್, ಜಿಪಂ ಯೋಜನಾ ನಿರ್ದೇಶಕ ಗುರುದತ್ ಎಂ. ಎನ್., ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

ಒಕ್ಕೂಟದ ಅಧ್ಯಕ್ಷರಾಗಿ ಸೌಮ್ಯ ಯಾನೆ ವೇದಾವತಿ, ಕಾರ್ಯದರ್ಶಿಯಾಗಿ ಅನುಪಮ ಆಯ್ಕೆಯಾದರು. ಇದೇ ಸಂದರ್ಭದಲ್ಲಿ ಆತ್ರಾಡಿ, 80 ಬಡಗಬೆಟ್ಟು ಗ್ರಾಪಂ ಮಟ್ಟದ ಒಕ್ಕೂಟಗಳನ್ನು ರಚಿಸಲಾಯಿತು. ಆತ್ರಾಡಿ ಗ್ರಾಪಂ ಮಟ್ಟದ ಒಕ್ಕೂಟದ ರಚನೆಯನ್ನು ತಾಪಂ ಅಧ್ಯಕ್ಷೆ ಸಂಧ್ಯಾ ಕಾಮತ್ ನೆರವೇರಿಸಿದರು. ಒಕ್ಕೂಟದ ಅಧ್ಯಕ್ಷರಾಗಿ ಕುಮುದ ಭಟ್, ಕಾರ್ಯದರ್ಶಿಯಾಗಿ ಆಶಾಲತಾ ಆಯ್ಕೆಯಾದರು.

80 ಬಡಗಬೆಟ್ಟು ಗ್ರಾಪಂ ಮಟ್ಟದ ಒಕ್ಕೂಟ ರಚನೆಯನ್ನು ಒಕ್ಕೂಟದ ಅಧ್ಯಕ್ಷೆ ಮಾಲತಿ ನಾಯಕ್ ನೆರವೇರಿಸಿದರು. ಕಾರ್ಯದರ್ಶಿಯಾಗಿ ನೀರಜಾ ಶೆಟ್ಟಿ ಆಯ್ಕೆಯಾದರು. ಸಭೆಯಲ್ಲಿ ಜಿಪಂ ಮಾಜಿ ಅಧ್ಯಕ್ಷ ಉಪೇಂದ್ರ ನಾಯಕ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News