ಕಾಸರಗೋಡು: ಮಂಗಳವಾರ 15 ಮಂದಿಗೆ ಕೊರೋನ ಪಾಸಿಟಿವ್

Update: 2020-09-01 12:56 GMT

ಕಾಸರಗೋಡು: ಜಿಲ್ಲೆಯಲ್ಲಿ ಎರಡು ತಿಂಗಳ ಬಳಿಕ ಕೊರೋನ ಸೋಂಕಿತರ ಸಂಖ್ಯೆ ಇಳಿಕೆಯಾಗಿದೆ. ಮಂಗಳವಾರ 15 ಮಂದಿಗೆ ಸೋಂಕು ದೃಢಪಟ್ಟಿದೆ. 15 ಮಂದಿಗೂ ಸಂಪರ್ಕದಿಂದ ಸೋಂಕು ತಗಲಿದೆ. 90 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗೆಡೆಗೊಂಡಿದ್ದಾರೆ.

1403 ಮಂದಿ ಈಗ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 5157 ಮಂದಿಗೆ ಸೋಂಕು ತಗಲಿದ್ದು, 38 ಮಂದಿ ಮೃತಪಟ್ಟಿದ್ದಾರೆ.  3716 ಮಂದಿ ಗುಣಮುಖರಾಗಿದ್ದಾರೆ.

ಮಂಗಳವಾರ ಮಂಗಲ್ಪಾಡಿ, ಕುಂಬಳೆ, ಮಧೂರು ತಲಾ 3, ಪಳ್ಳಿಕೆರೆ, ಎಣ್ಮಕಜೆ, ತ್ರಿಕ್ಕರಿಪುರ, ಅಜಾನೂರು, ಮುಳಿಯಾರು, ಮಂಜೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ತಲಾ ಒಬ್ಬರಿಗೆ ಸೋಂಕು ದೃಢಪಟ್ಟಿದೆ.
6386 ಮಂದಿ ನಿಗಾದಲ್ಲಿದ್ದು, 1069 ಮಂದಿ ಐಸೋಲೇಷನ್ ವಾರ್ಡ್ ನಲ್ಲಿದ್ದಾರೆ.   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News