ದ.ಕ. ಜಿಲ್ಲೆಯಲ್ಲಿ ಮಂಗಳವಾರ 352 ಮಂದಿಗೆ ಕೊರೋನ ಪಾಸಿಟಿವ್; 7 ಮಂದಿ ಮೃತ್ಯು

Update: 2020-09-01 14:28 GMT
ಸಾಂದರ್ಭಿಕ ಚಿತ್ರ

ಮಂಗಳೂರು, ಸೆ.1: ದ.ಕ.ಜಿಲ್ಲೆಯಲ್ಲಿ ಮಂಗಳವಾರ 352 ಮಂದಿಯಲ್ಲಿ ಕೊರೋನ ಸೋಂಕಿನ ಪಾಟಿಸಿವ್ ಪತ್ತೆಯಾಗಿದ್ದು, 7 ಮಂದಿ ಬಲಿಯಾಗಿದ್ದಾರೆ.

ಮಂಗಳವಾರ ಪಾಸಿಟಿವ್‌ಗೊಳಗಾದ 352 ಮಂದಿಯಲ್ಲಿ ಮಂಗಳೂರಿನ 165, ಬಂಟ್ವಾಳದ 87, ಪುತ್ತೂರಿನ 42, ಸುಳ್ಯದ 19, ಬೆಳ್ತಂಗಡಿಯ 25 ಮತ್ತು ಇತರ ಜಿಲ್ಲೆಯ 14 ಮಂದಿ ಸೇರಿದ್ದಾರೆ. ಮಂಗಳವಾರ ವರದಿಯಾದ 252 ಮಂದಿಯ ಸಹಿತ ಈವರೆಗೆ ಜಿಲ್ಲೆಯಲ್ಲಿ ಒಟ್ಟು 13,065 ಮಂದಿಗೆ ಕೊರೋನ ಸೋಂಕು ತಗುಲಿದೆ.

ಮಂಗಳೂರು ತಾಲೂಕಿನ 4, ಪುತ್ತೂರು, ತಾಲೂಕಿನ 2 ಮತ್ತು ಹೊರಜಿಲ್ಲೆಯ ಒಬ್ಬರು ಸಹಿತ ಜಿಲ್ಲೆಯಲ್ಲಿ ಮಂಗಳವಾರ 7 ಮಂದಿ ಕೊರೋನಕ್ಕೆ ಬಲಿಯಾಗಿದ್ದು, ಇದರೊಂದಿಗೆ ಈವರೆಗೆ ಬಲಿಯಾದವರ ಸಂಖ್ಯೆ 375ಕ್ಕೇರಿದೆ.

ಈವರೆಗೆ ದ.ಕ.ಜಿಲ್ಲೆಯ 97,852 ಮಂದಿಯ ಗಂಟಲಿನ ದ್ರವದ ಪರೀಕ್ಷೆ ಮಾಡಲಾಗಿದೆ. ಆ ಪೈಕಿ 13,065 ಮಂದಿಯ ವರದಿ ಪಾಸಿಟಿವ್ ಮತ್ತು 84,787 ಮಂದಿಯ ವರದಿ ನೆಗೆಟಿವ್ ಬಂದಿದೆ. ಜಿಲ್ಲೆಯಲ್ಲಿ ಮಂಗಳವಾರ 367 ಮಂದಿ ಕೊರೋನ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಅದರಲ್ಲಿ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 294 ಮತ್ತು ಬೇರೆ ಬೇರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 69 ಮಂದಿ ಸೇರಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 10,152ಕ್ಕೇರಿದೆ. ಜಿಲ್ಲೆಯಲ್ಲಿ 2538 ಸಕ್ರಿಯ ಪ್ರಕರಣಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News