ಪರ್ಕಳ: ಕೋವಿಡ್ ಸೋಂಕಿತರ ಅಂತ್ಯಕ್ರಿಯೆಗೆ ಸಹಕರಿಸಿದ ಸುನ್ನಿ ಹೆಲ್ಪ್ ಡೆಸ್ಕ್

Update: 2020-09-01 15:26 GMT

ಪರ್ಕಳ, ಸೆ.1: ಮೃತ ಕೋವಿಡ್-19 ಸೋಂಕಿತರ ಅಂತ್ಯಕ್ರಿಯೆಗೆ ಸಹಕರಿಸುವ ಮೂಲಕ ಸುನ್ನಿ ಹೆಲ್ಪ್ ಡೆಸ್ಕ್ ಮಾನವೀಯತೆ ಮೆರೆದಿದೆ. ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಕೊರೋನದಿಂದಾಗಿ ಮೃತಪಟ್ಟ ಪರ್ಕಳದ ವ್ಯಕ್ತಿಯೊಬ್ಬರ ಅಂತ್ಯಸಂಸ್ಕಾರಕ್ಕೆ ಅವರ ಕುಟುಂಬದವರು ಮುಂದೆ ಬಂದಿರಲಿಲ್ಲ. ಈ ಸಂದರ್ಭ ಸುನ್ನಿ ಹೆಲ್ಪ್ ಡೆಸ್ಕ್ ಕಾರ್ಯಕರ್ತರು ಆರೋಗ್ಯ ಇಲಾಖೆ ಮತ್ತು ಅಧಿಕಾರಿಗಳ ಅನುಮತಿ ಹಾಗೂ ಆ ಕುಟುಂಬದ ಬೇಡಿಕೆಯಂತೆ ಅವರ ಧರ್ಮದ ಪ್ರಕಾರ ಅಂತ್ಯಕ್ರಿಯೆ ನಡೆಸಲು ಇಂದ್ರಾಳಿ ರುದ್ರ ಭೂಮಿವರೆಗೆ ಮೃತದೇಹವನ್ನು ತಲುಪಿಸಿ ಮಾನವೀಯತೆ ಮೆರೆದಿದ್ದಾರೆ. ನಂತರ ಅಲ್ಲಿ ಅಂತ್ಯ ಸಂಸ್ಕಾರವನ್ನು ನಡೆಸಲಾಯಿತು.

ಈ ಸೇವೆಯಲ್ಲಿ ನೇಜಾರು ಅಬೂಬಕ್ಕರ್ ಹಾಜಿ, ಕೆ.ಎ.ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ, ರಫೀಕ್ ದೊಡ್ಡಣಗುಡ್ಡೆ, ಖಯ್ಯೂಮ್ ಮಲ್ಪೆ, ಬಿಲಾಲ್ ಮಲ್ಪೆ, ಅಲ್ತಾಫ್ ಮಲ್ಪೆ, ಅಫ್ಜಲ್ ಕರಂಬಳ್ಳಿ, ಬಶೀರ್ ಕರಂಬಳ್ಳಿ, ನಝೀರ್ ಕರಂಬಳ್ಳಿ ಹಾಗೂ ಆಸಿಫ್ ಮಂಚಿ ಭಾಗಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News