ಸುಶಾಂತ್ ಸಿಂಗ್ ರದ್ದು ಕೊಲೆ ಎನ್ನುವುದಕ್ಕೆ ಯಾವುದೇ ಸಾಕ್ಷಿ ಲಭಿಸಿಲ್ಲ ಎಂದ ಸಿಬಿಐ ಅಧಿಕಾರಿಗಳು: ವರದಿ

Update: 2020-09-01 15:31 GMT

ಹೊಸದಿಲ್ಲಿ: ಸುಶಾಂತ್ ಸಿಂಗ್ ರಜಪೂತ್ ರನ್ನು ಕೊಲೆಗೈಯಲಾಗಿದೆ ಎನ್ನುವುದನ್ನು ನಿರೂಪಿಸಲು ಯಾವುದೇ ಸಾಕ್ಷಿಗಳು ಇದುವರೆಗೆ ಲಭ್ಯವಾಗಿಲ್ಲ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಮೂರು ಸಿಬಿಐ ಅಧಿಕಾರಿಗಳು ತಿಳಿಸಿದ್ದಾಗಿ indiatoday.in ವರದಿ ಮಾಡಿದೆ.

ಜೂನ್ 14ರಂದು ಸುಶಾಂತ್ ಸಿಂಗ್ ಅವರ ಮೃತದೇಹ ಮುಂಬೈಯ ನಿವಾಸದಲ್ಲಿ ಪತ್ತೆಯಾಗಿತ್ತು.

ಪ್ರಕರಣ ಸಿಬಿಐಗೆ ಹಸ್ತಾಂತರಗೊಂಡ ನಂತರದಿಂದ ಸಿಬಿಐ ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸುತ್ತಿದೆ. ಮುಂಬೈ ಪೊಲೀಸರು ಕಲೆ ಹಾಕಿದ್ದ ಸಾಕ್ಷಿಗಳನ್ನು ಸಿಬಿಐ ಪರಿಶೀಲಿಸಿದೆ ಮತ್ತು ಪ್ರಕರಣಕ್ಕೆ ಸಂಬಂಧಿಸಿ ಹಲವರ ವಿಚಾರಣೆ ನಡೆಸಿದೆ. ಸಿಬಿಐ ವಿಚಾರಣೆ ನಡೆಸಿದವರಲ್ಲಿ ಸುಶಾಂತ್ ರ ಗೆಳತಿ ರಿಯಾ ಚಕ್ರವರ್ತಿ ಕೂಡ ಸೇರಿದ್ದಾರೆ.

ಯಾವುದೇ ಫೋರೆನ್ಸಿಕ್ ವರದಿಗಳು, ಶಂಕಿತ ಆರೋಪಿಗಳ ಹೇಳಿಕೆಗಳು ಅಥವಾ ಯಾವುದೇ ಸಾಕ್ಷಿಗಳು ಇದೊಂದು ಹತ್ಯೆ ಎನ್ನುವುದನ್ನು ಸಾಬೀತುಪಡಿಸಿಲ್ಲ ಎಂದು ಅಧಿಕಾರಿಗಳು ಹೇಳಿರುವುದಾಗಿ ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News