×
Ad

ಪಂಜಾಬ್ ಸರಕಾರದಿಂದ ಕೊನೆಗೂ ಬಹುಮಾನ ಸ್ವೀಕರಿಸಿದ ಬಾಕ್ಸರ್ ಸಿಮ್ರನ್‌ಜಿತ್ ಕೌರ್

Update: 2020-09-01 23:28 IST

ಹೊಸದಿಲ್ಲಿ, ಸೆ.1: ಐದು ತಿಂಗಳ ಸುದೀರ್ಘ ಕಾಯುವಿಕೆಯ ಬಳಿಕ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿರುವ ಬಾಕ್ಸರ್ ಸಿಮ್ರನ್‌ಜೀತ್ ಕೌರ್ ಕೊನೆಗೂ ತನಗೆ ಸೇರಬೇಕಾಗಿದ್ದ 5 ಲಕ್ಷ ರೂ. ಬಹುಮಾನವನ್ನು ಪಂಜಾಬ್ ಸರಕಾರದಿಂದ ಪಡೆದಿದ್ದಾರೆ. ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿರುವುದಕ್ಕೆ ಸರಕಾರ ಕೌರ್‌ಗೆ ಬಹುಮಾನದ ಭರವಸೆ ನೀಡಿತ್ತು.

2018ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಜಯಿಸಿರುವ ಕೌರ್ ಮುಖ್ಯಮಂತ್ರಿ ನೀಡಿರುವ ಆಶ್ವಾಸನೆಯಂತೆ ಇನ್ನಷ್ಟೇ ಸರಕಾರಿ ಉದ್ಯೋಗ ಪಡೆಯಬೇಕಾಗಿದೆ.

‘‘ತಾನು ಮಂಗಳವಾರ ಲುಧಿಯಾನಾದಲ್ಲಿ ಸಿಮ್ರನ್‌ಜೀತ್‌ರ ತಾಯಿ ರಾಜ್ಪಾಲ್ ಕೌರ್‌ರನ್ನು ಭೇಟಿಯಾಗಿ 5 ಲಕ್ಷ ರೂ. ಚೆಕನ್ನು ಹಸ್ತಾಂತರಿಸಿದ್ದೇನೆ. ಕೌರ್‌ಗೆ ಬೇಗನೆ ಸರಕಾರಿ ನೌಕರಿ ನೀಡುವ ಭರವಸೆ ನೀಡಿದ್ದೇನೆ. ಸಿಮ್ರನ್‌ಜಿತ್ ಪಾಟಿಯಾಲದಲ್ಲಿ ರಾಷ್ಟ್ರೀಯ ಶಿಬಿರದಲ್ಲಿ ತರಬೇತಿ ನಿರತವಾಗಿರುವ ಕಾರಣ ಅವರನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ’’ ಎಂದು ಪಂಜಾಬ್ ಕ್ರೀಡಾ ಸಚಿವ ರಾಣಾ ಗುರ್ಮಿತ್ ಸಿಂಗ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News