×
Ad

ಒಸಾಕಾ, ಕೆರ್ಬರ್ ದ್ವಿತೀಯ ಸುತ್ತಿಗೆ ಪ್ರವೇಶ

Update: 2020-09-01 23:39 IST

ನ್ಯೂಯಾರ್ಕ್, ಸೆ.1: ಜಪಾನ್‌ನ ನವೊಮಿ ಒಸಾಕಾ, ಜರ್ಮನಿಯ ಆ್ಯಂಜೆಲಿಕ್ ಕೆರ್ಬರ್ ಯುಎಸ್ ಓಪನ್‌ನ ಮಹಿಳೆಯರ ಸಿಂಗಲ್ಸ್‌ನಲ್ಲಿ ದ್ವಿತೀಯ ಸುತ್ತಿಗೆ ಪ್ರವೇಶಿಸಿದ್ದಾರೆ. ಅರ್ಥರ್ ಅಶೆ ಸ್ಟೇಡಿಯಂನಲ್ಲಿ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಒಸಾಕಾ ತಮ್ಮದೇ ದೇಶದ ಮಿಸಾಕಿ ಡೊಯ್ ವಿರುದ್ಧ 6-2, 5-7, 6-2 ಸೆಟ್‌ಗಳಿಂದ ಗೆಲುವು ಸಾಧಿಸಿದರು. ಗಾಯದ ಸಮಸ್ಯೆಯಿಂದಾಗಿ ಶನಿವಾರ ವೆಸ್ಟರ್ನ್-ಸದರ್ನ್ ಡಬ್ಲುಟಿಎ ಓಪನ್ ಫೈನಲ್‌ನಿಂದ ಹಿಂದೆ ಸರಿದಿದ್ದ ಒಸಾಕಾ ಆಟ ಆರಂಭವಾಗಿ ಅರ್ಧಗಂಟೆಯಲ್ಲಿ ಸ್ವಲ್ಪಮಟ್ಟಿನ ಫಿಟ್ನೆಸ್ ಸಮಸ್ಯೆ ಕಾಣಿಸಿಕೊಂಡಿತು. 22ರ ಹರೆಯದ ಒಸಾಕಾ 2ನೇ ಸೆಟ್‌ನಲ್ಲಿ ಅನಗತ್ಯ ತಪ್ಪೆಸಗಿ 5-2ರಿಂದ ಸೋಲುಂಡರು. 2018ರ ಚಾಂಪಿಯನ್ ಒಸಾಕಾ 3ನೇ ಸೆಟ್‌ನಲ್ಲಿ ತಿರುಗೇಟು ನೀಡಿ ಪಂದ್ಯವನ್ನು ವಶಪಡಿಸಿಕೊಂಡರು.

ಇದೇ ವೇಳೆ ಮಾಜಿ ಚಾಂಪಿಯನ್ ಆ್ಯಂಜೆಲಿಕ್ ಕೆರ್ಬರ್ 7 ತಿಂಗಳ ಬಳಿಕ ಟೆನಿಸ್ ಅಂಗಣಕ್ಕೆ ವಾಪಸಾಗಿದ್ದು, ಆಸ್ಟ್ರೇಲಿಯದ ಅಜ್ಲಾ ಟಾಮ್‌ಜಾಂಕೊವಿಕ್‌ರನ್ನು 6-4, 6-4 ನೇರ ಸೆಟ್‌ಗಳಿಂದ ಸೋಲಿಸಿ 2ನೇ ಸುತ್ತಿಗೆ ಲಗ್ಗೆ ಇಟ್ಟರು. 17ನೇ ಶ್ರೇಯಾಂಕದ ಕೆರ್ಬರ್ ಜನವರಿಯಲ್ಲಿ ನಡೆದಿದ್ದ ಆಸ್ಟ್ರೇಲಿಯನ್ ಓಪನ್‌ನಲ್ಲಿ 4ನೇ ಸುತ್ತು ತಲುಪಿದ ಬಳಿಕ ಯಾವುದೇ ಟೂರ್ನಿಯಲ್ಲಿ ಸ್ಪರ್ಧಿಸಿಲ್ಲ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News