ಒಬ್ಬರೇ ಕಾರು ಚಾಲನೆ, ಸೈಕ್ಲಿಂಗ್ ಮಾಡುವಾಗ ಮಾಸ್ಕ್ ಧರಿಸಬೇಕಿಲ್ಲ: ಆರೋಗ್ಯ ಸಚಿವಾಲಯ

Update: 2020-09-03 16:14 GMT

ಹೊಸದಿಲ್ಲಿ, ಸೆ. 3: ಒಬ್ಬಂಟಿಯಾಗಿ ಕಾರು ಚಾಲನೆ ಅಥವಾ ಸೈಕ್ಲಿಂಗ್ ಸಂದರ್ಭ ಮಾಸ್ಕ್ ಧರಿಸುವಂತೆ ಕೇಂದ್ರ ಆರೋಗ್ಯ ಸಚಿವಾಲಯ ಯಾವುದೇ ಮಾರ್ಗಸೂಚಿ ನೀಡಿಲ್ಲ ಎಂದು ಸರಕಾರದ ಉನ್ನತ ಅಧಿಕಾರಿಗಳು ಗುರುವಾರ ಹೇಳಿದ್ದಾರೆ. ಆದರೆ, ಯಾರಾದರೂ ಗುಂಪಾಗಿ ವ್ಯಾಯಾಮ, ಸೈಕ್ಲಿಂಗ್, ಜಾಗಿಂಗ್ ಮಾಡುತ್ತಿದ್ದರೆ ಮಾಸ್ಕ್ ಧರಿಸಬೇಕು ಹಾಗೂ ಪರಸ್ಪರ ಸೋಂಕು ಉಂಟಾಗದಂತೆ ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ದೇಶದಲ್ಲಿ ಕೊರೋನ ಸೋಂಕು ವ್ಯಾಪಕವಾಗುತ್ತಿರುವ ನಡುವೆಯೂ ಕಾರಿನಲ್ಲಿ ಸಂಚರಿಸುತ್ತಿರುವವರು ಮಾಸ್ಕ್ ಧರಿಸುತ್ತಿಲ್ಲ ಎಂದು ದೊಡ್ಡ ಸಂಖ್ಯೆಯ ಜನರು ದೂರು ನೀಡಿದ್ದಾರೆ. ಒಬ್ಬಂಟಿಯಾಗಿ ಕಾರು ಚಾಲನೆ ಅಥವಾ ಸೈಕ್ಲಿಂಗ್ ಮಾಡುವಾಗ ಮಾಸ್ಕ್ ಹಾಕುವುದು ಅಗತ್ಯವೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಭೂಷಣ್, ವ್ಯಕ್ತಿಯೋರ್ವ ಒಬ್ಬಂಟಿಯಾಗಿ ಕಾರು ಚಲಾಯಿಸುವಾಗ ಅಥವಾ ಸೈಕ್ಲಿಂಗ್ ಮಾಡುವಾಗ ಮಾಸ್ಕ್ ಧರಿಸಬೇಕು ಎಂಬ ಯಾವುದೇ ಮಾರ್ಗಸೂಚಿಯನ್ನು ಆರೋಗ್ಯ ಸಚಿವಾಲಯ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News