ಸೆ.22ರಿಂದ 29 ರವರೆಗೆ ಸಿಬಿಎಸ್‌ಇ 10 ಮತ್ತು 12ನೇ ತರಗತಿಗಳ ಪೂರಕ ಪರೀಕ್ಷೆ

Update: 2020-09-04 16:25 GMT
ಸಾಂದರ್ಭಿಕ ಚಿತ್ರ  

ಹೊಸದಿಲ್ಲಿ,ಸೆ.4: 10 ಮತ್ತು 12ನೇ ತರಗತಿಗಳ ಪೂರಕ ಪರೀಕ್ಷೆಗಳು ಸೆ.22ರಿಂದ 29ರವರೆಗೆ ನಡೆಯಲಿವೆ ಎಂದು ಸಿಬಿಎಸ್‌ಇ ಶುಕ್ರವಾರ ಪ್ರಕಟಿಸಿದೆ.

ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾಥಿಗಳು ಪಾರದರ್ಶಕ ಬಾಟಲ್‌ಗಳಲ್ಲಿ ಹ್ಯಾಂಡ್ ಸ್ಯಾನಿಟೈಸರ್ ಮತ್ತು ಕುಡಿಯುವ ನೀರನ್ನು ತರಬೇಕು ಹಾಗು ಮಾಸ್ಕ್‌ನ್ನು ಕಡ್ಡಾಯವಾಗಿ ಧರಿಸಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

 ಕೊರೋನ ವೈರಸ್ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಪರೀಕ್ಷೆಗಳಿಗೆ ಹಾಜರಾಗುವುದು ವಿದ್ಯಾರ್ಥಿಗಳ ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುವುದರಿಂದ ಈ ತಿಂಗಳಿನಲ್ಲಿ ನಿಗದಿತ 12ನೇ ತರಗತಿ ಪರೀಕ್ಷೆಯನ್ನು ಮುಂದೂಡುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಯನ್ನು ಬೆಳಿಗ್ಗೆ ಸರ್ವೋಚ್ಚ ನ್ಯಾಯಾಲಯದಲ್ಲಿ ವಿರೋಧಿಸಿದ್ದ ಸಿಬಿಎಸ್‌ಇ,ವಿದ್ಯಾರ್ಥಿಗಳ ಸುರಕ್ಷತೆಗಾಗಿ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿತ್ತು.

ಸರ್ವೋಚ್ಚ ನ್ಯಾಯಾಲಯವು ಸೆ.10ರಂದು ಅರ್ಜಿಯ ವಿಚಾರಣೆಯನ್ನು ನಡೆಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News