ಸುಳ್ಳು ಮಾಹಿತಿ ಹರಡುತ್ತಿರುವುದಕ್ಕಾಗಿ ಯು ಟ್ಯೂಬ್, ಇತರರಿಗೆ ಮುಂಬೈ ಪೊಲೀಸರ ನೋಟಿಸ್

Update: 2020-09-06 14:20 GMT

ಮುಂಬೈ,ಸೆ.6: ಬಾಲಿವುಡ್ ನಟ ಸುಷಾಂತ್ ಸಿಂಗ್ ರಾಜಪೂತ್ ಸಾವಿಗೆ ಸಂಬಂಧಿಸಿದಂತೆ ಆಕ್ಷೇಪಾರ್ಹ ವೀಡಿಯೊಗಳು ಮತ್ತು ಮಾಹಿತಿಗಳನ್ನು ಹರಡುವ ಮೂಲಕ ಮಹಾರಾಷ್ಟ್ರ ಸರಕಾರ ಮತ್ತು ಮುಂಬೈ ಪೊಲೀಸ್ ಇಲಾಖೆಯ ವರ್ಚಸ್ಸಿಗೆ ಹಾನಿಯುಂಟು ಮಾಡುತ್ತಿರುವುಕ್ಕಾಗಿ ಮುಂಬೈನ ಸೈಬರ್ ಪೊಲೀಸ್ ಘಟಕವು ಯು ಟ್ಯೂಬ್ ಮತ್ತು ಕೆಲವು ವಿದ್ಯುನ್ಮಾನ ಮಾಧ್ಯಮ ಸಂಸ್ಥೆಗಳಿಗೆ ನೋಟಿಸ್‌ಗಳನ್ನು ಹೊರಡಿಸಿದೆ.

ಮಾನನಷ್ಟ ಮತ್ತು ಶಾಂತಿಭಂಗವನ್ನು ಪ್ರಚೋದಿಸಲು ಉದ್ದೇಶಪೂರ್ವಕವಾಗಿ ಅವಮಾನಕ್ಕೆ ಸಂಬಂಧಿಸಿದ ಐಪಿಸಿಯ ಕಲಮ್‌ಗಳನ್ನು ಉಲ್ಲೇಖಿಸಿರುವ ನೋಟಿಸ್‌ನಲ್ಲಿ ಎಂಟು ದಿನಗಳಲ್ಲಿ ತನಿಖಾ ಕಚೇರಿಗೆ ಹಾಜರಾಗುವಂತೆ ಸೂಚಿಸಲಾಗಿದೆ.

 ಈ ವಿಷಯವನ್ನು ದೃಢಪಡಿಸಿದ ಮುಂಬೈ ಪೊಲೀಸ್ ಆಯುಕ್ತ ಪರಮಬೀರ್ ಸಿಂಗ್ ಅವರು,ನಕಲಿ ಸುದ್ದಿ ಮತ್ತು ಸುಳ್ಳು ಮಾಹಿತಿಗಳ ಹರಡುವಿಕೆಗೆ ಸಂಬಂಧಿಸಿದ ಪ್ರಕರಣದಲ್ಲಿ ತನಿಖೆಗೆ ಹಾಜರಾಗುವಂತೆ ಪ್ರತಿವಾದಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News