×
Ad

ಕ್ರೊಯೇಷಿಯಾವನ್ನು ಮಣಿಸಿದ ಪೋರ್ಚುಗಲ್

Update: 2020-09-06 23:27 IST

ಲಂಡನ್, ಸೆ.6: ನೇಷನ್ಸ್ ಲೀಗ್ ಫುಟ್ಬಾಲ್‌ನ ಗ್ರೂಪ್ -3 ಪಂದ್ಯದಲ್ಲಿ ಹಾಲಿ ಚಾಂಪಿಯನ್ ಪೋರ್ಚುಗಲ್ ತಂಡವು ಕ್ರೊಯೇಷಿಯಾ ತಂಡವನ್ನು 4-1 ಗೋಲುಗಳಿಂದ ಮಣಿಸಿದೆ.

 ಗಾಯದಿಂದಾಗಿ ಸ್ಟಾರ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಹೊರಗುಳಿದಿದ್ದರೂ , ಪೋರ್ಚುಗಲ್ ಸುಲಭದ ಜಯ ಸಾಧಿಸಿತು.

 ಯುರೋಪಿಯನ್ ಚಾಂಪಿಯನ್ ಪೋರ್ಚುಗಲ್ ಪರ ಜೊವೊ ಕ್ಯಾನ್ಸಿಲೊ 41ನೇ ನಿಮಿಷದಲ್ಲಿ ತಂಡದ ಗೋಲು ಖಾತೆಯನ್ನು ತೆರೆದರು. ಪ್ರಥಮಾರ್ಧದಲ್ಲಿ 1-0 ಮುನ್ನಡೆ ಸಾಧಿಸಿದ್ದ ಪೋರ್ಚುಗಲ್ ತಂಡಕ್ಕೆ ದ್ವಿತೀಯಾರ್ಧದಲ್ಲಿ ಡಿಯಾಗೋ ಜೋಟಾ (58ನೇ ನಿಮಿಷ), ಜೊವಾವೊ ಫೆಲಿಕ್ಸ್(70ನೇ ನಿ.) ಮತ್ತು ಕೊನೆಯಲ್ಲಿ ಆ್ಯಂಡ್ರೆ ಸಿಲ್ವಾ(90+4ನೇ ನಿ.) ಗೋಲು ಜಮೆ ಮಾಡಿ ತಂಡದ ಗೆಲುವಿಗೆ ನೆರವಾದರು.

ಕ್ರೊಯೇಷಿಯಾ ಪರ ಬ್ರೂನೊ ಪೆಟ್ಕೊವಿಕ್ (90+1ನೇ ನಿ.) ಏಕೈಕ ಗೋಲು ಜಮೆ ಮಾಡಿದರು.

 99 ಅಂತರ್‌ರಾಷ್ಟ್ರೀಯ ಗೋಲುಗಳನ್ನು ದಾಖಲಿಸಿರುವ ರೊನಾಲ್ಡೊ ಕಾಲು ನೋವಿನಿಂದಾಗಿ ತಂಡದಿಂದ ಹೊರಗುಳಿದಿದ್ದರು. 2018ರ ನವೆಂಬರ್ ಬಳಿಕ ರೊನಾಲ್ಡೊ ಇದೇ ಮೊದಲ ಬಾರಿ ಪೋರ್ಚುಗಲ್ ತಂಡದ ಪಂದ್ಯದಲ್ಲಿ ಕಾಣಿಸಿಕೊಳ್ಳಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News