ಆಸ್ಕರ್ ಪ್ರಶಸ್ತಿ ವಿಜೇತ ನಿರ್ದೇಶಕ ಜಿರಿ ಮೆನ್ಝೆಲ್ ನಿಧನ
Update: 2020-09-07 15:04 IST
ಲಾಸ್ ಏಂಜಲಿಸ್, ಸೆ.7:ಆಸ್ಕರ್ ಪ್ರಶಸ್ತಿ ವಿಜೇತ ಝೆಕ್ ಚಲನಚಿತ್ರ ನಿರ್ದೇಶಕ ಜಿರಿ ಮೆನ್ಝೆಲ್ ಅವರು ಗಂಭೀರ ಆರೋಗ್ಯ ಸಮಸ್ಯೆಯಿಂದಾಗಿ,ಸುದೀರ್ಘ ಜೀವನ್ಮರಣ ಹೋರಾಟದ ಬಳಿಕ ಕೊನೆಯುಸಿರೆಳೆದರು. ಅವರಿಗೆ 82 ವರ್ಷ ವಯಸ್ಸಾಗಿತ್ತು.
ಹಿರಿಯ ಚಲನಚಿತ್ರ ನಿರ್ಮಾಪಕರ ನಿಧನದ ಸುದ್ದಿಯನ್ನು ಮೆನ್ಝೆಲ್ ಅವರ ಪತ್ನಿ ಓಲ್ಗಾ ರವಿವಾರ ತಡರಾತ್ರಿ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ.
ಫೆಬ್ರವರಿ 23,1938 ರಂದು ಜನಿಸಿದ ಮೆನ್ಝೆಲ್ ಪರಾಗ್ವೆಯಲ್ಲಿ ಚಲನಚಿತ್ರ ನಿರ್ದೇಶನದ ಅಧ್ಯಯನ ಮಾಡಿದರು. ಜೆಕೊಸ್ಲೊವಾಕ್ ನ್ಯೂ ವೇವ್ ಆಫ್ ಸಿನೆಮಾದ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು. 1967ರಲ್ಲಿ ಮೆನ್ಝೆಲ್ ತನ್ನ ಮೊದಲ ನಿರ್ದೇಶನದ ಸಾಹಸಕ್ಕಾಗಿ ಅತ್ಯುತ್ತಮ ವಿದೇಶಿ ಭಾಷೆಯ ಚಲನಚಿತ್ರ ಅಕಾಡಮಿ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದರು.