ರಾಷ್ಟೀಯ ಇ-ಆರ್ಟ್ ಸ್ಪರ್ಧೆ : ಕಾರ್ಕಳದ ಪ್ರಿಯಾ ಶೆಟ್ಟಿ ಪ್ರಥಮ

Update: 2020-09-09 14:04 GMT
ಪ್ರಿಯಾ, ಕುರ್ಸಿದ್, ರೋಶ್ನ

ಶಿರ್ವ, ಸೆ.9: ಶಿರ್ವ ಮುಲ್ಕಿ ಸುಂದರ್ ರಾಮ್ ಶೆಟ್ಟಿ(ಎಂಎಸ್‌ಆರ್‌ಎಸ್) ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ರಾಷ್ಟೀಯ ಭಾವೈಕ್ಯತೆಗೆ ಸಂಬಂಧಿಸಿದಂತೆ ಇತ್ತೀಚೆಗೆ ಏರ್ಪಡಿಸಲಾದ ರಾಷ್ಟೀಯ ಇ-ಆರ್ಟ್ ಸ್ಪರ್ಧೆ ಯಲ್ಲಿ ಕಾರ್ಕಳದ ಪ್ರಿಯಾ ಶೆಟ್ಟಿ ಪ್ರಥಮ, ಸುರತ್ಕಲ್‌ನ ಕುರ್ಸಿದ್ ಯಾಕೂಬ್ ದ್ವಿತೀಯ ಹಾಗೂ ಮಂಗಳೂರು ಸೈಂಟ್ ಅಲೋಸಿಯಸ್‌ನ ರೋಶ್ನಾ ಎಸ್. ರೇಜಿ ತೃತೀಯ ಸ್ಥಾನ ಗಳಿಸಿದ್ದಾರೆ.

 ಸ್ಪರ್ಧಾ ನಿರ್ಣಾಯಕರಾಗಿ ಕರ್ನಾಟಕ ಲಲಿತ ಕಲಾ ಅಕಾಡೆಮಿಯ ಮಾಜಿ ಸದಸ್ಯ ಬಳ್ಳಾರಿಯ ಕಲಾವಿದ ನಿಹಾಲ್ ವಿಕ್ರಮ್ ರಾಜು ಮತ್ತು ಉಡುಪಿಯ ಕಲಾವಿದ ಹಾಗೂ ಕರ್ನಾಟಕ ಲಲಿತ ಕಲಾ ಅಕಾಡೆಮಿಯ ಮಾಜಿ ಸದಸ್ಯ ರಾಘವೆೀಂದ್ರ ಕೆ.ಅಮೀನ್ ಭಾಗವಹಿಸಿದ್ದರು.

ಮಂಗಳೂರು ವಿವಿಯ ಎನ್‌ಎಸ್‌ಎಸ್ ಯೋಜನಾಧಿಕಾರಿ ಡಾ.ನಾಗರತ್ನಾ, ಶಿರ್ವ ಕಾಲೇಜಿನ ಪ್ರಾಂಶುಪಾಲೆ ಡಾ.ನಯನಾ ಪಕ್ಕಳ, ನ್ಯಾಶನಲ್ ಗೋಲ್ಡ್‌ನ ಯೂಸೂಫ್ ಹೈದರ್, ಕಾಲೇಜಿನ ಎನ್ನೆಸ್ಸೆಸ್ ಅಧಿಕಾರಿ ಪ್ರೊ. ಮುರುಗೇಶಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News