ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿ ಸ್ವಚ್ಛತೆ ಆ್ಯಪ್ ಮೂಲಕ ದೂರು ನೀಡಿ: ದ.ಕ. ಜಿಲ್ಲಾಧಿಕಾರಿ

Update: 2020-09-09 17:14 GMT

ಮಂಗಳೂರು, ಸೆ.9: ಭಾರತ ಸರಕಾರದ ವಸತಿ ಮತ್ತು ನಗರ ಸಚಿವಾಲಯ ಹೊರಡಿಸಿರುವ ‘swachhata-MoHUA’ ಆ್ಯಪ್‌ನ್ನು ಬಳಸಿ ಸಾರ್ವಜನಿಕರು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿ ಸ್ವಚ್ಛತೆಗೆ ಸಂಬಂಧಿಸಿದ ದೂರುಗಳನ್ನು ಛಾಯಾಚಿತ್ರದೊಂದಿಗೆ ದಾಖಲಿಸಬಹುದು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ತಿಳಿಸಿದ್ದಾರೆ.

ಆ್ಯಪ್ ಬಳಸಿಕೊಂಡು ತಮ್ಮ ನಗರ ವ್ಯಾಪ್ತಿ ಶೇಖರಣೆ ಆಗಿರುವ ಕಸ ವಿಲೇವಾರಿ ಆಗದೇ ಇರುವ ಬಗ್ಗೆ, ಕಸ ವಿಲೇವಾರಿ ವಾಹನ ತಮ್ಮ ವಾರ್ಡ್‌ನಲ್ಲಿ ಬಾರದೇ ಇದ್ದಲ್ಲಿ, ರಸ್ತೆಗಳ ಸ್ವಚ್ಛತೆಯಲ್ಲಿ ಲೋಪ ಕಂಡುಬಂದಲ್ಲಿ, ಸಾರ್ವಜನಿಕ ಶೌಚಾಲಯ ಅಸ್ವಚ್ಛತೆ, ನೀರಿನ ಸೌಲಭ್ಯ-ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯ ಕಂಡುಬಂದಲ್ಲಿ ದೂರು ನೀಡಬಹುದಾಗಿದೆ.

ಇಂತಹ ದೂರುಗಳಿಗೆ ಸಂಬಂಧಿಸಿದಂತೆ ಕೈಗೊಂಡ ಕ್ರಮದ ಬಗ್ಗೆ ದೂರು ನೀಡಿದ ನಿರ್ದಿಷ್ಟ ವ್ಯಕ್ತಿಗೆ ಮಾಹಿತಿ ರವಾನಿಸಲಾಗುವುದು. ಆ್ಯಪ್ ಬಳಸುವ ಮೂಲಕ ನಗರದಲ್ಲಿ ಸ್ವಚ್ಛತೆ ನಿರ್ವಹಿಸಲು ಆಡಳಿತದೊಂದಿಗೆ ಕೈಜೋಡಿಸಲು ಕೋರಲಾಗಿದೆ. ಈ ಆ್ಯಪ್‌ನ್ನು ಗೂಗಲ್ ಪ್ಲೇ ಸ್ಟೋರ್ ‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News