ಇಂಡಿಯನ್ ಸೋಶಿಯಲ್ ಫೋರಂ ಕುವೈತ್ ವತಿಯಿಂದ ರಕ್ತದಾನ ಅಭಿಯಾನ

Update: 2020-09-10 05:56 GMT

ಕುವೈತ್: ಕುವೈತ್ ಬ್ಲಡ್ ಬ್ಯಾಂಕ್'ಗಳಲ್ಲಿ ರಕ್ತದ ಅಭಾವವಿರುವುದನ್ನು ಮನಗಂಡು ಇಂಡಿಯನ್ ಸೋಶಿಯಲ್ ಫೋರಂ ಕೇಂದ್ರ ಸಮಿತಿಯು ಕುವೈಟಿನಾದ್ಯಂತ ರಕ್ತದಾನ ಶಿಬಿರಗಳನ್ನು ನಡೆಸುವಂತೆ ವಿವಿಧ ರಾಜ್ಯ ಸಮಿತಿಗಳಿಗೆ ಕರೆ ನೀಡಿದೆ. ಈ ನಿಟ್ಟಿನಲ್ಲಿ ಐಎಸ್ಎಫ್ ಕರ್ನಾಟಕ ಘಟಕವು ಸೆ. 11 ಮತ್ತು ಸೆ. 26ರಂದು  ಸಾರ್ವಜನಿಕ ರಕ್ತದಾನ ಶಿಬಿರಗಳನ್ನು ಹಮ್ಮಿಕೊಂಡಿದೆ.

ಬ್ಲಡ್ ಬ್ಯಾಂಕ್ ಕುವೈತ್ ಮತ್ತು ಇಂಡಿಯನ್ ಸೋಶಿಯಲ್ ಪೋರಮ್ ಕುವೈಟ್ ಜಂಟಿ ಸಹಭಾಗಿತ್ವದಲ್ಲಿ ಸೆ. 11ರ ಅಪರಾಹ್ನ 1ರಿಂದ ಸಂಜೆ 6 ಗಂಟೆಯವರೆಗೆ ಇಲ್ಲಿನ ಅದಾನ್ ಬ್ಲಡ್ ಬ್ಯಾಂಕ್‌'ನಲ್ಲಿ ಹಾಗೂ  ಸೆ. 2ರ ಅಪರಾಹ್ನ 1ರಿಂದ ಸಂಜೆ 6 ಗಂಟೆಯವರೆಗೆ ಜಾಬ್ರಿಯಾ ಬ್ಲಡ್ ಬ್ಯಾಂಕ್'ನಲ್ಲಿ  ಸಾರ್ವಜನಿಕ ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿದೆ.

ರಕ್ತದಾನವು ಮಹಾದಾನವಾಗಿದ್ದು, ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಅಸಾಧ್ಯವಾಗಿದ್ದು ದಾನಿಗಳು ನೀಡುವ ರಕ್ತವೇ ರೋಗಿಗಳ ಜೀವಕ್ಕೆ ಆಸರೆಯಾಗಿದೆ. ಆದ್ದರಿಂದ ಕುವೈತ್ ನಲ್ಲಿರುವ ಅನಿವಾಸಿ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ  ರಕ್ತದಾನದ ಉದಾತ್ತವಾದ ಕಾರ್ಯದಲ್ಲಿ ಪಾಲ್ಗೊಳ್ಳಬೇಕಾಗಿ ಇಂಡಿಯನ್ ಸೋಶಿಯಲ್ ಫೋರಂ ಕರೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News