ಇನ್ಫೋಮೇಟ್ ಫೌಂಡೇಶನ್ ಬೆಳ್ತಂಗಡಿ ತಾಲೂಕು ಕಚೇರಿ ಶುಭಾರಂಭ

Update: 2020-09-10 06:42 GMT

ಬೆಳ್ತಂಗಡಿ : ಇನ್ಫೋಮೇಟ್ ಫೌಂಡೇಶನ್ ಇದರ ಬೆಳ್ತಂಗಡಿ ತಾಲೂಕು ಕಚೇರಿ ಹಾಗೂ ಎ.ಎಂ ಇಂಟರ್ನ್ಯಾಷನಲ್ ಆನ್ಲೈನ್ ಸರ್ವಿಸ್ ಸೆಂಟರ್ ಉದ್ಘಾಟನಾ ಸಮಾರಂಭವು ಬೆಳ್ತಂಗಡಿ ಜಮೀಯತುಲ್ ಫಲಾಹ್ ಸಭಾಂಗಣದಲ್ಲಿ ನಡೆಯಿತು.

ಕಚೇರಿ ಮತ್ತು ಸಭಾ ಕಾರ್ಯಕ್ರಮವನ್ನು ಬೆಳ್ತಂಗಡಿ ದಾರುಸ್ಸಲಾಂ ಎಜುಕೇಶನ್ ಸೆಂಟರ್ ಚೆಯರ್ಮೆನ್ ಅಸ್ಸೈಯ್ಯದ್ ಜಿಫ್ರಿ ತಂಙಳ್ ಉದ್ಘಾಟನೆ ಮಾಡಿ ದುಆ ಆಶೀರ್ವಚನ ನೀಡಿದರು. ಬಡವರಿಗೆ ಸರಕಾರದಿಂದ ಸಿಗುವ ಸವಲತ್ತುಗಳನ್ನು ಪಡೆಯಲು ಬೇಕಾದ ಮಾಹಿತಿ, ಸರ್ಕಾರಿ ಉದ್ಯೋಗದ ಮಾರ್ಗದರ್ಶನ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಮುಂತಾದ ಉದ್ದೇಶಗಳನ್ನಿಟ್ಟುಕೊಂಡು ಪ್ರಾರಂಭಿಸಲಾದ ಇನ್ಫೋಮೇಟ್ ಫೌಂಡೇಶನ್ ಸಂಸ್ಥೆಯು ಇತರರಿಗೆ ಮಾದರಿಯಾಗಿದ್ದು ಯಾವುದೇ ಜಾತಿ, ಸಂಘಟನೆಗಳಿಗೆ ಸೀಮಿತವಾಗದೆ ಸಮಾಜದ ಎಲ್ಲಾ ಬಡವರ್ಗದವರಿಗೆ ಸೇವೆ ಸಿಗುವಂತಾಗಲಿ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ವಿಕಾರ್ ಜನರಲ್ ಬೆಳ್ತಂಗಡಿ ಧರ್ಮ ಪ್ರಾಂತದ ವಂದನೀಯ ಫಾದರ್ ಜೋಸೆಫ್ ವಲಿಯಪರಂಬಿಲ್ ಮಾತನಾಡಿ ಬಡ ಜನರ ಸೇವೆ, ಸರ್ಕಾರದ ಸೌಲಭ್ಯಗಳ ಮಾಹಿತಿ ಅರ್ಹರಿಗೆ ತಲುಪಿಸುವ ಕಾರ್ಯವು ದೇವರ ಸೇವೆಗೆ ಸಮಾನವೆಂದೂ ಇದನ್ನು ಕೇವಲ ಬೆಳ್ತಂಗಡಿ ತಾಲೂಕಿಗೆ ಸೀಮಿತಗೊಳಿಸದೆ ಜಿಲ್ಲೆ, ರಾಜ್ಯಾದ್ಯಂತ ಇದರ ಸೇವೆ ಸಿಗುವಂತಾಗಬೇಕೆಂದರು.

ವೇದಿಕೆಯಲ್ಲಿ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಯಾಕೂಬ್ ಕೊಯ್ಯೂರ್ ರಿಗೆ ಸನ್ಮಾನ ನಡೆಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಯಾಕೂಬ್ ಕೊಯ್ಯೂರ್ ನನ್ನ ಒಬ್ಬ ವಿದ್ಯಾರ್ಥಿ ಆತನೇ ನಿರ್ದೇಶಕನಾದ ಸಂಸ್ಥೆಯ ಶುಭಾರಂಭ ಕಾರ್ಯಕ್ರಮದಲ್ಲಿ ತನ್ನ ಗುರುವಿನ ಸಾಧನೆಯನ್ನು ಗುರುತಿಸಿ ಸನ್ಮಾನಿಸಿದ್ದು ನಾನು ಸ್ವೀಕರಿಸಿದ ಎಲ್ಲಾ ಸನ್ಮಾನಗಳಿಗಿಂತ ದೊಡ್ಡದು ಎಂದು ಅಭಿಪ್ರಾಯಪಟ್ಟರು.

ಕರ್ನಾಟಕ ದಾರಿಮಿ ಉಲಮಾ ಒಕ್ಕೂಟದ ಅಧ್ಯಕ್ಷ ಎಸ್.ಬಿ ದಾರಿಮಿ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಉಡುಪಿ ಜಿಲ್ಲಾ ವ್ಯವಸ್ಥಾಪಕ ಮುಹಮ್ಮದ್ ಸಫ್ವಾನ್, ಭಾರತ ಸೇವಾದಳ ಶಿಕ್ಷಣ ಇಲಾಖೆ ಬೆಂಗಳೂರು ಇದರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಆಲ್ಫೋನ್ಸ್ ಫ್ರಾಂಕೋ, ಬೆಳ್ತಂಗಡಿ ಲೋಕೋಪಯೋಗಿ ಇಲಾಖೆಯ‌ ಸಹಾಯಕ ಅಭಿಯಂತರರಾದ  ಶಿವಪ್ರಸಾದ್ ಅಜಿಲ ಅಳದಂಗಡಿ, ದಸಂಸ ಮೈಸೂರು ವಿಭಾಗೀಯ ಸಂಚಾಲಕ ವಸಂತ್ ಬಿ.ಕೆ‌ , ಮಂಗಳೂರು ಪಿ.ಎ ಕಾಲೇಜಿನ ರೀಸರ್ಚ್ ಸೆಂಟರ್ ನಿರ್ದೇಶಕ ಡಾ. ಸೈಯದ್ ಅಮೀನ್, ಮಂಗಳೂರು ACE ಐಎಎಸ್  ಅಕಾಡೆಮಿ ನಿರ್ದೇಶಕ ನಝೀರ್ ಅಹಮದ್ ಶುಭ ಹಾರೈಸಿದರು.

ತಾಲೂಕು ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಬಿ.ಎ ನಝೀರ್, ಎಸ್ಕೆಎಸ್ಸೆಸ್ಸೆಫ್ ಬೆಳ್ತಂಗಡಿ ಡಿವಿಜನ್ ಅಧ್ಯಕ್ಷ ನಝೀರ್ ಅಝ್ಹರಿ ಬೊಳ್ಮಿನಾರ್,  ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬೆಳ್ತಂಗಡಿ ಅಧ್ಯಕ್ಷ ಮುಸ್ತಫಾ ಜಿಕೆ, ತಾಲೂಕು ಮುಸ್ಲಿಂ ಐಕ್ಯವೇದಿಕೆಯ ಅಧ್ಯಕ್ಷ ಸಲೀಂ ಜಿಕೆ, ಪತ್ರಕರ್ತರ ಸಂಘ ಬೆಳ್ತಂಗಡಿ ಅಧ್ಯಕ್ಷ ಅಶ್ರಫ್ ಅಲೀಕುಂಞಿ, ಆಲ್ ಇಂಡಿಯಾ ಇಮಾಮ್ ಕೌನ್ಸಿಲ್ ರಾಜ್ಯ ಕಾರ್ಯದರ್ಶಿ ಜಾಫರ್ ಸಾದಿಕ್ ಫೈಝಿ,  ಜಮೀಯತುಲ್ ಫಲಾಹ್ ಮಾಜಿ ಅಧ್ಯಕ್ಷ ಅಲಿಯಬ್ಬ ಪುಲಾಬೆ, ಕಾರ್ಯದರ್ಶಿ  ಹೈದರ್ ನೀರ್ಸಾಲ್ ಸದಸ್ಯರಾದ ಉಮರ್ ಕುಂಞಿ ನಾಡ್ಜೆ, ಉಮರ್ ಬಿ. (ಚಪ್ಪಲ್ ಮಾರ್ಟ್) ಸ್ಟಾರ್ಲೈನ್ ಇಂಗ್ಲಿಷ್ ಮೀಡಿಯಂ ಶಾಲೆ ಜಮಲಾಬಾದ್ ಸಂಚಾಲಕ ಹಬೀಬ್ ಸಾಹೇಬ್, ಕ್ರಿಯೇಟಿವ್ ಫೌಂಡೇಶನ್ ಮಂಗಳೂರು  ಸದಸ್ಯ ಅಕ್ಬರ್ ತಲಪಾಡಿ, ದಾರುಸ್ಸಲಾಂ ಎಜುಕೇಶನ್ ಸೆಂಟರ್ ಬೆಳ್ತಂಗಡಿ ಕಾರ್ಯದರ್ಶಿ ಅಬ್ದುಲ್ ರಝಾಕ್ ಧೂಂ ಧಮಾಕ್, ಬಶೀರ್ ದಾರಿಮಿ ನಾವೂರು, ಅಲ್ ಮದಿನಾ ಮಂಜನಾಡಿ ಇಸ್ಲಾಮಿಕ್ ಸಂಸ್ಥೆಯ ಅಬ್ದುರ್ರಝಾಕ್ ನಾವೂರು, ಎ.ಎಂ ಇಂಟರ್ನ್ಯಾಷನಲ್ ಆನ್ಲೈನ್ ಸರ್ವಿಸ್ ಸೆಂಟರ್ ವ್ಯವಸ್ಥಾಪಕ ಅಶ್ರಫ್ ಕಟ್ಟೆ ಮುಂತಾದವರು ಉಪಸ್ಥಿತರಿದ್ದರು.

ಇನ್ಫೋಮೇಟ್ ಫೌಂಡೇಶನ್ ಸಂಸ್ಥೆಯ ನಿರ್ದೇಶಕ ಅಬ್ದುಲ್ ಖಾದರ್ ನಾವೂರು ಸ್ವಾಗತ ಮತ್ತು ಪ್ರಾಸ್ತಾವಿಕ ಭಾಷಣಗೈದು ಸಂಸ್ಥೆಯ ಪರಿಚಯವನ್ನು ಮಾಡಿಕೊಟ್ಟರು. ಮಂಗಳೂರಿನ ಖ್ಯಾತ ಸಮಾಜ ಸೇವಕ ಹಾಗೂ ಸಂಪನ್ಮೂಲ ವ್ಯಕ್ತಿ ರಫೀಕ್ ಮಾಸ್ಟರ್ ಕಾರ್ಯಕ್ರಮವನ್ನು ನಿರೂಪಿಸಿದರು. ಇನ್ಫೋಮೇಟ್ ಫೌಂಡೇಶನ್ ಸದಸ್ಯ ಅಬೂಬಕರ್ ಸಿದ್ದೀಕ್ ನಾವೂರು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News