ಬಿಜೆಪಿ vs ಬಿಜೆಪಿ: ನೀಟ್ ಬಗ್ಗೆ ಕೇಂದ್ರ ಸಚಿವರ ಅಂಕಿ ಅಂಶವನ್ನು ಪ್ರಶ್ನಿಸಿದ ಸುಬ್ರಮಣಿಯನ್ ಸ್ವಾಮಿ

Update: 2020-09-10 13:05 GMT
 ಸುಬ್ರಮಣಿಯನ್ ಸ್ವಾಮಿ

ಹೊಸದಿಲ್ಲಿ: ಬಿಜೆಪಿಯ ರಾಜ್ಯಸಭಾ ಸಂಸದ ಸುಬ್ರಮಣಿಯನ್ ಸ್ವಾಮಿ ಅವರು ಜೆಇಇ-ನೀಟ್ ವಿಚಾರದಲ್ಲಿ ತಮ್ಮದೇ ಪಕ್ಷದ ಸರಕಾರದ ವಿರುದ್ಧ ವಾಗ್ವಾದಕ್ಕೆ ಇಳಿದಿದ್ದಾರೆ.

“ಜೆಇಇ ಮೈನ್‍ಗೆ 8.5 ಲಕ್ಷ ವಿದ್ಯಾರ್ಥಿಗಳು ನೋಂದಣಿ ಮಾಡಿದ್ದರು ಹಾಗೂ ಸೆಪ್ಟೆಂಬರ್ 1 ಹಾಗೂ 6ರ ನಡುವೆ ನಡೆದ ಪರೀಕ್ಷೆಗಳಿಗೆ 6.35 ಲಕ್ಷ ಮಂದಿ ಹಾಜರಾಗಿದ್ದಾರೆ,'' ಎಂದು ಕೇಂದ್ರ ಶಿಕ್ಷಣ ಸಚಿವ ಪೊಖ್ರಿಯಾಲ್ ನಿಶಾಂಕ್ ಅವರು ಮಾಡಿದ್ದ ಟ್ವೀಟ್‍ನಲ್ಲಿನ ಅಂಕಿಅಂಶಗಳನ್ನು ಸ್ವಾಮಿ ಪ್ರಶ್ನಿಸಿದ್ದಾರೆ.  ಜೆಇಇ ಪರೀಕ್ಷೆಗೆ ಹಾಜರಾಗಲು ಪಾಸ್ ಗಳನ್ನು 18 ಲಕ್ಷ ವಿದ್ಯಾರ್ಥಿಗಳು ಡೌನ್ ಲೋಡ್ ಮಾಡಿದ್ದರೂ 8 ಲಕ್ಷ ಮಂದಿ ಮಾತ್ರ ಹಾಜರಾಗಿದ್ದರು ಎಂಬ ಸ್ವಾಮಿಯ ಈ ಹಿಂದಿನ ಟ್ವೀಟ್ ಗೆ ಸಚಿವರು ಮೇಲಿನಂತೆ ಪ್ರತಿಕ್ರಿಯಿಸಿದ್ದರು.

"660 ಕೇಂದ್ರಗಳಲ್ಲಿ ಪರೀಕ್ಷೆಗೆ ಹಾಜರಾಗಲು 9,53,473 ಅಭ್ಯರ್ಥಿಗಳು ನೋಂದಣಿ ಮಾಡಿದ್ದಾರೆ ಎಂದು  ಶಿಕ್ಷಣ ಸಚಿವಾಲಯ ಸುಪ್ರೀಂ ಕೋರ್ಟ್ ಗೆ ಹೇಳಿದೆ. ಆದರೆ ಸಚಿವರ ಟ್ವೀಟ್ ನಲ್ಲಿ 8.58 ಲಕ್ಷ ಎಂದು ಬರೆಯಲಾಗಿದೆ. ಯಾವುದು ಅಧಿಕೃತ,'' ಎಂದು ಸ್ವಾಮಿ ಇಂದು ಪ್ರಶ್ನಿಸಿದ್ದಾರೆ.

ಸುಪ್ರೀಂ ಕೋರ್ಟ್ ಮುಂದೆ ಸರಕಾರ ಹಾಜರು ಪಡಿಸಿತ್ತೆನ್ನಲಾದ ದಾಖಲೆಯ ಪ್ರತಿಯನ್ನೂ ಪೋಸ್ಟ್ ಮಾಡಿದ ಸ್ವಾಮಿ, ಅದರಲ್ಲಿ ಅಭ್ಯರ್ಥಿಗಳ ಸಂಖ್ಯೆ 9.5 ಲಕ್ಷಕ್ಕಿಂತಲೂ ಅಧಿಕವಿದೆಯೆಂದು ಬರೆಯಲಾಗಿದ್ದನ್ನು ತೋರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News