ನಟಿ ಸಾರಾ ಖಾನ್‌ಗೆ ಕೊರೋನ
Update: 2020-09-10 22:33 IST
ಮುಂಬೈ, ಸೆ. 10: ಟಿ.ವಿ. ನಟಿ ಸಾರಾ ಖಾನ್ ಅವರಿಗೆ ಕೊರೋನ ಸೋಂಕು ದೃಢಪಟ್ಟಿದೆ. ಅವರು ಮನೆಯಲ್ಲೇ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲಿ ತನ್ನ ಅಭಿಮಾನಿಗಳಿಗೆ ಮಾಹಿತಿ ನೀಡಿರುವ ಸಾರಾ ಖಾನ್, ತಾನು ಕೊರೋನ ಸೋಂಕಿಗೆ ಒಳಗಾಗಿದ್ದೇನೆ. ಪ್ರಸ್ತುತ ಮನೆಯಲ್ಲೇ ಕ್ವಾರಂಟೈನ್‌ಗೆ ಒಳಗಾಗಿದ್ದೇನೆ ಹಾಗೂ ಆರಾಮವಾಗಿದ್ದೇನೆ ಎಂದಿದ್ದಾರೆ.