×
Ad

ಡೊಮಿನಿಕ್ ಥೀಮ್ ಸೆಮಿಫೈನಲ್‌ಗೆ ತೇರ್ಗಡೆ

Update: 2020-09-10 23:28 IST

ನ್ಯೂಯಾರ್ಕ್, ಸೆ.10: ಎರಡನೇ ಶ್ರೇಯಾಂಕದ ಡೊಮಿನಿಕ್ ಥೀಮ್ ಆಸ್ಟ್ರೇಲಿಯದ ಅಲೆಕ್ಸ್ ಡಿ ಮಿನೌರ್ ವಿರುದ್ಧ ನೇರ ಸೆಟ್‌ಗಳ ಅಂತರದಿಂದ ಜಯ ಸಾಧಿಸುವುದರೊಂದಿಗೆ ಅಮೆರಿಕನ್ ಓಪನ್ ಟೆನಿಸ್ ಟೂರ್ನಮೆಂಟ್‌ನಲ್ಲಿ ಸೆಮಿಫೈನಲ್‌ಗೆ ತೇರ್ಗಡೆಯಾಗಿದ್ದಾರೆ.

 ಅರ್ಥರ್ ಅಶೆ ಸ್ಟೇಡಿಯಂನಲ್ಲಿ ಬುಧವಾರ 2 ಗಂಟೆ, 4 ನಿಮಿಷಗಳ ಕಾಲ ನಡೆದ ಪುರುಷರ ಸಿಂಗಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ಆಸ್ಟ್ರೀಯ ಆಟಗಾರ ಥೀಮ್ 21ನೇ ಶ್ರೇಯಾಂಕದ ಅಲೆಕ್ಸ್‌ರನ್ನು 6-1, 6-2, 6-4 ನೇರ ಸೆಟ್‌ಗಳ ಅಂತರದಿಂದ ಮಣಿಸಿದರು.

ಥೀಮ್ ರವಿವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಸ್ಥಾನ ಗಿಟ್ಟಿಸಲು ಮುಂದಿನ ಸುತ್ತಿನಲ್ಲಿ ರಶ್ಯದ ಡ್ಯಾನಿಲ್ ಮೆಡ್ವೆಡೆವ್‌ರನ್ನು ಎದುರಿಸಲಿದ್ದಾರೆ.

ಜರ್ಮನಿ ಆಟಗಾರ ಅಲೆಕ್ಸಾಂಡರ್ ಝ್ವೆರೆವ್ ಮತ್ತೊಂದು ಸೆಮಿಫೈನಲ್‌ನಲ್ಲಿ ಸ್ಪೇನ್‌ನ 20ನೇ ಶ್ರೇಯಾಂಕದ ಪಾಬ್ಲೊ ಕರ್ರೆನೊ ಬುಸ್ಟಾರನ್ನು ಎದುರಿಸಲಿದ್ದಾರೆ. ಶುಕ್ರವಾರ ಪುರುಷರ ವಿಭಾಗದ ಸೆಮಿಫೈನಲ್ ಪಂದ್ಯಗಳು ನಡೆಯುತ್ತವೆ.

ಬಾಲ್ಯದ ಗೆಳೆಯ ರುಬ್ಲೆವ್‌ಗೆ ಸೋಲುಣಿಸಿದ ಮಡ್ವೆಡೆವ್

ಬಾಲ್ಯದ ಗೆಳೆಯ ಆ್ಯಂಡ್ರೆ ರುಬ್ಲೆವ್‌ರನ್ನು ಮಣಿಸಿದ ಡ್ಯಾನಿಲ್ ಮೆಡ್ವೆಡೆವ್ ಯುಎಸ್ ಓಪನ್‌ನಲ್ಲಿ ಸೆಮಿ ಫೈನಲ್ ತಲುಪಿದರು. ಈ ಮೂಲಕ ಚೊಚ್ಚಲ ಗ್ರಾನ್‌ಸ್ಲಾಮ್ ಪ್ರಶಸ್ತಿ ಗೆಲ್ಲುವತ್ತ ದಿಟ್ಟ ಹೆಜ್ಜೆ ಇಟ್ಟರು.

ಬುಧವಾರ ನಡೆದ ಪುರುಷರ ಸಿಂಗಲ್ಸ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಮೆಡ್ವೆಡೆವ್ ತಮ್ಮದೇ ದೇಶದ ರುಬ್ಲೆವ್‌ರನ್ನು 7-6(6), 6-3, 7-6(5)ಸೆಟ್‌ಗಳಿಂದ ಮಣಿಸಿದರು. 2007ರ ಬಳಿಕ ರಶ್ಯದ ಇಬ್ಬರು ಆಟಗಾರರು ಕ್ವಾರ್ಟರ್ ಫೈನಲ್‌ನಲ್ಲಿ ಸೆಣಸಾಡಿದರು. 13 ವರ್ಷಗಳ ಹಿಂದೆ ಫ್ರೆಂಚ್ ಓಪನ್‌ನಲ್ಲಿ ಇಗೊರ್ ಆ್ಯಂಡ್ರೀವ್ ಹಾಗೂ ನಿಕೊಲೆ ಡ್ಯಾವಿಡೆಂಕೊ ಅಂತಿಮ-8ರ ಹಂತದಲ್ಲಿ ಮುಖಾಮುಖಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News