ಅಝರೆಂಕಾ ಸೆಮಿಫೈನಲ್‌ಗೆ, ಸೆರೆನಾ ವಿಲಿಯಮ್ಸ್ ಎದುರಾಳಿ
ನ್ಯೂಯಾರ್ಕ್, ಸೆ.10: ಯುಎಸ್ ಓಪನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ನಲ್ಲಿ ಎಲಿಸ್ ಮೆರ್ಟೆನ್ಸ್ ವಿರುದ್ಧ 6-1, 6-0 ನೇರ ಸೆಟ್‌ಗಳಿಂದ ಜಯ ಸಾಧಿಸಿರುವ ವಿಕ್ಟೋರಿಯ ಅಝರೆಂಕಾ ಸೆಮಿಫೈನಲ್ ತಲುಪಿದ್ದಾರೆ. ಮುಂದಿನ ಸುತ್ತಿನಲ್ಲಿ ಸೆರೆನಾ ವಿಲಿಯಮ್ಸ್‌ರಿಂದ ಕಠಿಣ ಸವಾಲು ಎದುರಿಸಲಿದ್ದಾರೆ. ವೃತ್ತಿಜೀವನದಲ್ಲಿ ಮೊದಲ ಬಾರಿ 16ನೇ ಶ್ರೇಯಾಂಕದ ಮೆರ್ಟೆನ್ಸ್‌ರನ್ನು ಎದುರಿಸಿದ ಅಝರೆಂಕಾ ಪಂದ್ಯದುದ್ದಕ್ಕೂ ಪ್ರಾಬಲ್ಯ ಮೆರೆದರು.
ಅಝರೆಂಕಾ ಕಳೆದ ತಿಂಗಳು ನಾಲ್ಕು ವರ್ಷಗಳ ಬಳಿಕ ಮೊದಲ ಬಾರಿ ವೆಸ್ಟರ್ನ್-ಸದರ್ನ್ ಓಪನ್ ಪ್ರಶಸ್ತಿ ಜಯಿಸಿದ್ದರು.
ಅಝರೆಂಕಾ 7 ವರ್ಷಗಳ ಬಳಿಕ ಮೊದಲ ಪ್ರಮುಖ ಟ್ರೋಫಿಯ ನಿರೀಕ್ಷೆಯಲ್ಲಿದ್ದಾರೆ. 2013ರಲ್ಲಿ ಆಸ್ಟ್ರೇಲಿಯನ್ ಓಪನ್‌ನಲ್ಲಿ ಕೊನೆಯ ಬಾರಿ ಪ್ರಶಸ್ತಿ ಜಯಿಸಿದ್ದರು. ಮತ್ತೊಂದೆಡೆ ಸೆರೆನಾ 24ನೇ ಪ್ರಶಸ್ತಿ ಜಯಿಸಿ ಮಾರ್ಗರೆಟ್ ಕೋರ್ಟ್ ದಾಖಲೆ ಸರಿಗಟ್ಟಲು ಎದುರು ನೋಡುತ್ತಿದ್ದಾರೆ. ಸೆರೆನಾ 2012 ಹಾಗೂ 2013ರಲ್ಲಿ ಯುಎಸ್ ಓಪನ್ ಫೈನಲ್‌ನಲ್ಲಿ ಅಝರೆಂಕಾರನ್ನು ಸೋಲಿಸಿದ್ದರು.