×
Ad

ಕ್ಯಾಲಿಫೋರ್ನಿಯಾ ಕಾಡ್ಗಿಚ್ಚಿಗೆ ಬಲಿಯಾದವರ ಸಂಖ್ಯೆ 10ಕ್ಕೇರಿಕೆ

Update: 2020-09-11 13:36 IST

 ಲಾಸ್ ಏಂಜಲಿಸ್(ಅಮೆರಿಕ), ಸೆ.11: ಉತ್ತರ ಕ್ಯಾಲಿಫೋರ್ನಿಯಾದ ಅರಣ್ಯ ಪ್ರದೇಶದಲ್ಲಿ ಉಂಟಾಗಿರುವ ಕಾಡ್ಗಿಚ್ಚಿನ ಜ್ವಾಲೆಗೆ ಹತ್ತು ಮಂದಿ ಬಲಿಯಾಗಿದ್ದು,ಹದಿನಾರು ಮಂದಿ ಕಾಣೆಯಾಗಿದ್ದಾರೆ.

ಈ ಕಾಡ್ಗಿಚ್ಚು ವರ್ಷದ ಅತ್ಯಂತ ಮಾರಕವಾದ ಬೆಂಕಿ ಅವಘಡವಾಗಿದೆ. ಕಾಣೆಯಾದವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಸಾವಿನ ಸಂಖ್ಯೆಯಲ್ಲೂ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಈ ವಾರದ ಆರಂಭದಲ್ಲಿ ಇಲ್ಲಿನ ನಾರ್ಥ್ ಕಾಂಪ್ಲೆಕ್ಸ್‌ನಿಂದ ಶುರುವಾದ ಬೆಂಕಿಯ ಜ್ವಾಲೆ ಬಿರುಗಾಳಿಯಿಂದಾಗಿ ಶುಕ್ರವಾರದ ಹೊತ್ತಿಗೆ ನಿಧಾನವಾಗಿ ಎಲ್ಲೆಡೆ ವ್ಯಾಪಿಸಿತು. ಬೆಂಕಿಯ ಜ್ವಾಲೆಯಿಂದ ಹೊಮ್ಮಿದ ಹೊಗೆ ಸುತ್ತಮುತ್ತಲಿನ ಪ್ರದೇಶದಲ್ಲಿ ವ್ಯಾಪಿಸಿಕೊಂಡಿತು. ದಟ್ಟ ಹೊಗೆಯಿಂದಾಗಿ ಹೆಲಿಕಾಪ್ಟರ್‌ನಿಂದ ಬೆಂಕಿ ನಂದಿಸಲು ಪ್ರಯತ್ನಿಸುವವರಿಗೂ ಸರಿಯಾಗಿ ದಾರಿ ಕಾಣದೆ ಪರದಾಡುವಂತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News