ಜಾಗತಿಕ ಆರ್ಥಿಕ ಸ್ವಾತಂತ್ರ್ಯ ಸೂಚ್ಯಂಕ: 105ನೇ ಸ್ಥಾನಕ್ಕೆ ಕುಸಿದ ಭಾರತ: ವರದಿ

Update: 2020-09-11 12:59 GMT

ಹೊಸದಿಲ್ಲಿ: ಜಾಗತಿಕ ಆರ್ಥಿಕ ಸ್ವಾತಂತ್ರ್ಯ ಸೂಚ್ಯಂಕ 2020ರಲ್ಲಿ ಭಾರತ 105ನೇ ಸ್ಥಾನ ಪಡೆದಿದೆ. ಕಳೆದ ಬಾರಿ 76ನೇ ಸ್ಥಾನ ಪಡೆದಿದ್ದ ಭಾರತ ಈ ಬಾರಿ 26 ಸ್ಥಾನಗಳಷ್ಟು ಕೆಳಗೆ ಕುಸಿದಿದೆ.

ಕೆನಡಾದ ಫ್ರೇಸರ್ ಇನ್‍ಸ್ಟಿಟ್ಯೂಟ್ ಈ ಸೂಚ್ಯಂಕವನ್ನು ತನ್ನ ‘ಇಕನಾಮಿಕ್ ಫ್ರೀಡಂ ಆಫ್ ದಿ ವಲ್ರ್ಡ್ : 2020’ ವಾರ್ಷಿಕ ವರದಿಯಲ್ಲಿ ಪ್ರಕಟಿಸಿದೆ.

ಈ ಪಟ್ಟಿಯಲ್ಲಿ ಹಾಂಕಾಂಗ್ ಹಾಗೂ ಸಿಂಗಾಪುರ ಪ್ರಥಮ ಹಾಗೂ ಎರಡನೇ ಸ್ಥಾನ ಪಡೆದಿದೆ. ಟಾಪ್ 10 ಸ್ಥಾನಗಳಲ್ಲಿ  ನ್ಯೂಝಿಲೆಂಡ್, ಸ್ವಿಝಲ್ರ್ಯಾಂಡ್, ಅಮೆರಿಕ, ಆಸ್ಟ್ರೇಲಿಯಾ, ಮಾರಿಷಸ್, ಜಾರ್ಜಿಯಾ, ಕೆನಡಾ ಹಾಗೂ ಐಲ್ರ್ಯಾಂಡ್ ದೇಶಗಳಿವೆ.

ಈ ಸೂಚ್ಯಂಕದಲ್ಲಿ ಚೀನಾ 124ನೇ ಸ್ಥಾನದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News