ಇರಾಕ್‌ನಿಂದ 2,000 ಸೈನಿಕರ ಹಿಂದೆಗೆತ: ಅಮೆರಿಕ

Update: 2020-09-11 16:20 GMT

ವಾಶಿಂಗ್ಟನ್, ಸೆ. 11: ಇರಾಕ್‌ನಲ್ಲಿರುವ ತನ್ನ ಸೈನಿಕರ ಸಂಖ್ಯೆಯಲ್ಲಿ ತೀವ್ರ ಕಡಿತ ಮಾಡಲಾಗುವುದು ಎಂದು ಅಮೆರಿಕ ಬುಧವಾರ ಪ್ರಕಟಿಸಿದೆ. ಅಧ್ಯಕ್ಷೀಯ ಚುನಾವಣೆಗೆ ಎರಡು ತಿಂಗಳುಗಳಿರುವಾಗ, ವಿದೇಶಗಳಲ್ಲಿನ ಅಮೆರಿಕದ ‘ಕೊನೆಯಿಲ್ಲದ ಯುದ್ಧ’ಗಳನ್ನು ನಿಲ್ಲಿಸುವ ತನ್ನ ಭರವಸೆಗಳನ್ನು ಈಡೇರಿಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದಾಗಿದ್ದಾರೆ.

ಅಮೆರಿಕದ ಸೇನಾಕಡಿತ ಯೋಜನೆಯಿಂದಾಗಿ ಇರಾಕ್‌ನಲ್ಲಿರುವ ಅಮೆರಿಕದ ಸೈನಿಕರ ಸಂಖ್ಯೆಯು 5,200ರಿಂದ 3,000ಕ್ಕೆ ಇಳಿಯಲಿದೆ. ಇದೇ ಮಾದರಿಯ ಸೇನಾ ಕಡಿತವನ್ನು ಅದು ಅಫ್ಘಾನಿಸ್ತಾನಕ್ಕಾಗಿಯೂ ಘೋಷಿಸುವ ನಿರೀಕ್ಷೆಯಿದೆ.

ಅಧಿಕಾರವನ್ನು ಉಳಿಸಿಕೊಳ್ಳುವುದಕ್ಕಾಗಿ ಕಠಿಣ ಸ್ಪರ್ಧೆಯ ಚುನಾವಣೆಯನ್ನು ಎದುರಿಸುತ್ತಿರುವ ಟ್ರಂಪ್, ತನ್ನನ್ನು ಮತದಾರರಲ್ಲಿ ‘ಶಾಂತಿ ದೂತ’ ಎಂಬುದಾಗಿ ಬಿಂಬಿಸಲು ಬಯಸಿದ್ದಾರೆ ಎಂದು ಹೇಳಲಾಗಿದೆ.

 ‘‘ಕೊನೆಯಿಲ್ಲದ ಯುದ್ಧಗಳಿಗೆ ಕೊನೆ. ಈ ಬಗ್ಗೆ ನಾವು ಸಾಕಷ್ಟು ಕೇಳಿದ್ದೇವೆ. ಆದರೆ ಹಾಗೆ ಆಗಿರುವುದನ್ನು (ಯುದ್ಧ ಕೊನೆಗೊಂಡಿರುವುದನ್ನು) ನಾವು ಕೇಳಿಲ್ಲ’’ ಎಂದು ಶ್ವೇತಭವನದ ವಕ್ತಾರೆ ಕೇಲೀ ಮೆಕನಾನಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News