ನೀಟ್ ಆಕಾಂಕ್ಷಿ 18 ವರ್ಷದ ವಿದ್ಯಾರ್ಥಿನಿ ಆತ್ಮಹತ್ಯೆ

Update: 2020-09-12 11:49 GMT

ಹೊಸದಿಲ್ಲಿ : ವೈದ್ಯಕೀಯ ಪ್ರವೇಶ ಪರೀಕ್ಷೆ ನಡೆಯಲು ಇನ್ನೇನು ಒಂದು ದಿನ ಇರುವಾಗ ತಮಿಳುನಾಡಿನ ಮಧುರೈನ ನೀಟ್ ಆಕಾಂಕ್ಷಿ, 18 ವರ್ಷದ ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಜ್ಯೋತಿ ದುರ್ಗಾ ಎಂಬ ಹೆಸರಿನ ಈ ಯುವತಿ ಆತ್ಮಹತ್ಯೆ ಪತ್ರ ಕೂಡ ಬರೆದಿಟ್ಟಿದ್ದು, ತನ್ನ ನಿರ್ಧಾರಕ್ಕೆ ಕುಟುಂಬವನ್ನು ದೂರಬಾರದು ಎಂದು  ಅದರಲ್ಲಿ ತಿಳಿಸಿದ್ದಾಳೆ.

ಆಕೆ ಕಳೆದ ವರ್ಷ ನೀಟ್ ಪರೀಕ್ಷೆಯಲ್ಲಿ ತೇರ್ಗಡೆಯಾಗದೇ ಇದ್ದುದರಿಂದ ಈ ಬಾರಿಯ ಪರೀಕ್ಷೆ ಕುರಿತು ಸಾಕಷ್ಟು ದುಗುಡ ಹೊಂದಿದ್ದಳು. ತನ್ನ ಆತಂಕವನ್ನು ಆಕೆ ತಂದೆಯ ಬಳಿಯೂ ತೋಡಿಕೊಂಡಿದ್ದಳೆನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News