ಮುಸ್ಲಿಂ ಸಮುದಾಯದ ಬೇಡಿಕೆಗಳಿಗೆ ಸ್ಪಂದಿಸುವೆ: ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್

Update: 2020-09-13 13:01 GMT

ಉಳ್ಳಾಲ: ಮುಸ್ಲಿಂ ಸಮುದಾಯದ ನ್ಯಾಯೋಚಿತ ಬೇಡಿಕೆ ಮತ್ತು ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಲು ನಾನು ಮತ್ತು ನಮ್ಮ ಪಕ್ಷ ಬದ್ಧವಾಗಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹೇಳಿದರು.

ಅವರು ರವಿವಾರ ಉಳ್ಳಾಲ ದರ್ಗಾಕ್ಕೆ ಭೇಟಿ ನೀಡಿದ ಬಳಿಕ ದರ್ಗಾ ಆಡಳಿತ ಸಮಿತಿಯ ಕಛೇರಿಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದರು.

ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ಉಳ್ಳಾಲ ದರ್ಗಾ ಭೇಟಿ ನೀಡಿದ ಸಲೀಂ ಅಹ್ಮದ್ ರಿಗೆ ದರ್ಗಾ ಸಮಿತಿಯ ವತಿಯಿಂದ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಅಭಿನಂದಿಸಿ ಸನ್ಮಾನಿಸಿದರು.

ಈ ಸಂದರ್ಭ ವಿಧಾನ ಪರಿಷತ್ ವಿಪಕ್ಷ ಮುಖ್ಯ ಸಚೇತಕ ನಾರಾಯಣ ಸ್ವಾಮಿ ಅವರನ್ನುಊ ಸನ್ಮಾನಿಸಲಾಯಿತು.

ಶಾಸಕ ಯು.ಟಿ.ಖಾದರ್, ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್, ಕೆಪಿಸಿಸಿ ಕಾರ್ಯದರ್ಶಿ ಟಿ.ಎಂ.ಸಹೀದ್,  ಕಾಂಗ್ರೆಸ್ ನಾಯಕ ಬಾಲ್ ರಾಜ್ ಉಪಸ್ಥಿತರಿದ್ದರು.

ಜಿಲ್ಲಾ ಕಾಂಗ್ರೆಸ್ ವಕ್ತಾರ ಹಾಗೂ ದರ್ಗಾ ಸಮಿತಿಯ ಫಾರೂಕ್ ಉಳ್ಳಾಲ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಸಲೀಂ ಅಹ್ಮದ್ ಕಾಂಗ್ರೆಸ್ ಪಕ್ಷದ ಉನ್ನತ ಹುದ್ದೆಯಾಗಿರುವ ಕಾರ್ಯಾಧ್ಯಕ್ಷರಾಗಿ ನೇಮಕವಾಗುವ ಮೂಲಕ ಮುಸ್ಲಿಂ ಸಮುದಾಯದ ಬಹುದಿನದ ಬೇಡಿಕೆ ಈಡೇರಿಕೆಯಾದಂತಾಗಿದೆ ಎಂದರು.

 ಉಳ್ಳಾಲ ದರ್ಗಾ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ತ್ವಾಹ ಹಾಜಿ, ಚಾರೀಟೇಬಲ್ ಟ್ರಸ್ಟ್ ಉಪಾಧ್ಯಕ್ಷರುಗಳಾದ ಮುಸ್ತಫ ಅಬ್ದುಲ್ಲಾ ಹಾಜಿ, ಇಬ್ರಾಹಿಂ ಕಕ್ಕೆತೋಟ, ಕಾರ್ಯದರ್ಶಿ ಹಾಜಿ.ಎ.ಕೆ.ಮೊಹಿಯ್ಯುದ್ದೀನ್, ಅರಬಿಕ್ ಟ್ರಸ್ಟ್ ಕಾರ್ಯದರ್ಶಿ ಆಸಿಫ್ ಅಬ್ದುಲ್ಲಾ, ಕಾಂಗ್ರೆಸ್ ಮುಖಂಡರುಗಳಾದ ಎನ್.ಎಸ್.ಕರೀಂ, ಫಾರೂಕ್ ಫರಂಗಿಪೇಟೆ, ದರ್ಗಾ ಸಮಿತಿ ಸದಸ್ಯರಾದ ಹಸನಬ್ಬ ಕಡಪರ, ಹಮ್ಮಬ್ಬ ಕೋಟೇಪುರ, ಕಾಸಿಂ ಕೋಡಿ, ನಝೀರ್ ಸುಂದರ ಬಾಗ್, ಇಬ್ರಾಹಿಂ ಹಾಜಿ ಉಳ್ಳಾಲ ಬೈಲ್, ನಾಸೀರ್ ಸಾಮಣೀಗೆ, ಅರೇಬಿಕ್ ಟ್ರಸ್ಟ್ ಸದಸ್ಯ ಯೂಸುಫ್ ಉಳ್ಳಾಲ್, ಹನೀಫ್ ಕೋಡಿ ಮುಂತಾದವರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News