ಸೆ.14ರಿಂದ ಎಸ್ಸೆಸ್ಸೆಫ್ ನಿಂದ ಕೋವಿಡೋತ್ತರ ಮಾಹಿತಿ ಕಾರ್ಯಾಗಾರ

Update: 2020-09-13 13:34 GMT

ಮಂಗಳೂರು: ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ವಿಸ್ಡಂ ಹಾಗೂ ಕ್ಯಾಂಪಸ್ ಟೀಮ್ ನಿಂದ ಸೆ.14,15 ಹಾಗೂ 16 ರಂದು ನಡೆಯುವ ಕೋವಿಡೋತ್ತರ ಮಾಹಿತಿ ಕಾರ್ಯಾಗಾರದ ಉದ್ಘಾಟನೆಯು ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಸಯ್ಯಿದ್ ಉಮ್ಮರ್ ಅಸ್ಸಖಾಫ್ ತಂಙಳ್ ಮದನಿರವರ ಅಧ್ಯಕ್ಷತೆಯಲ್ಲಿ ಸೆಪ್ಟಂಬರ್ 14 ಸೋಮವಾರ ರಾತ್ರಿ 8:30 ಗಂಟೆಗೆ ರಾಜ್ಯ ಎಸ್ಸೆಸ್ಸೆಫ್ ನ ಅಧಿಕೃತ ಯೂಟೂಬ್ ಚಾನಲ್ ನಲ್ಲಿ ನಡೆಯಲಿದೆ.

ಎಸ್.ವೈ.ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ ಎಮ್ಮೆಸ್ಸೆಂ ಅಬ್ದುರ್ರಶೀದ್ ಝೈನಿ ಸಖಾಫಿ ಕಾಮಿಲ್ ರವರು ಕಾರ್ಯಾಗಾರವನ್ನು ಉದ್ಘಾಟಿಸಲಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಕ್ಯಾಂಪಸ್ ವಿದ್ಯಾರ್ಥಿಗಳಿಗೆ ನಡೆಸಿದ ಪ್ರಬಂಧ ಸ್ಪರ್ಧೆಯ ಫಲಿತಾಂಶ ಘೋಷಣೆಯನ್ನು ಎಸ್ಸೆಸ್ಸೆಫ್ ರಾಷ್ಟ್ರೀಯ ಕಾರ್ಯದರ್ಶಿ ಶರೀಫ್ ಮಾಸ್ಟರ್ ಬೆಂಗಳೂರು ಮಾಡಲಿದ್ದಾರೆ. ಕೋವಿಡೋತ್ತರ ಮಾಹಿತಿ ಕಾರ್ಯಾಗಾರದಲ್ಲಿ ಅಬ್ದುರ್ರಝಾಕ್ ಅನಂತಾಡಿ, ಡಾ. ಸರ್ಫ್ರಾಝ್ ಜೆ ಹಾಸಿಂ ಹಾಗೂ ಹೈದರ್ ಮರ್ಧಾಳ ರವರು ಶಿಕ್ಷಣ, ಮನಃಶಾಸ್ತ್ರ ಹಾಗೂ ಅರೋಗ್ಯ ಮೊದಲಾದ ವಿಷಯಗಳಲ್ಲಿ ಮಾಹಿತಿಯನ್ನು ನೀಡಲಿದ್ದಾರೆ.

ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ರಾಜ್ಯ ಸುಪ್ರೀಂ ಕೌನ್ಸಿಲ್ ಕನ್ವೀನರ್ ಎಂ.ಬಿ.ಎಂ ಸಾದಿಕ್ ಮಾಸ್ಟರ್ ಮಲೆಬೆಟ್ಟು, ನಾಯಕರಾದ ಹಮೀದ್ ಬಜ್ಪೆ,ಎಸ್ಸೆಸ್ಸೆಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಯಾಕೂಬ್ ಮಾಸ್ಟರ್ ಕೊಳಕೇರಿ,ಕೋಶಾಧಿಕಾರಿ ರವೂಫ್ ಖಾನ್,ಉಪಾಧ್ಯಕ್ಷ ಹಾಫಿಳ್  ಸುಫ್ಯಾನ್ ಸಖಾಫಿ ಕಾವಲ್ಕಟ್ಟೆ,ಕಾರ್ಯದರ್ಶಿಗಳಾದ ಹಾಫಿಳ್ ಯಾಕೂಬ್ ಸಅದಿ ನಾವೂರು,ಕೆ.ಎಂ ಮುಸ್ತಫಾ ನಈಮಿ,ಸಿರಾಜುದ್ದೀನ್ ಸಖಾಫಿ ಕನ್ಯಾನ,ಅಶ್ರಫ್ ರಝಾ ಅಂಜದಿ,ಹುಸೈನ್ ಸಅದಿ ಹೊಸ್ಮಾರ್,ರಾಜ್ಯ ಕ್ಯಾಂಪಸ್ ಹಾಗೂ ವಿಸ್ಡಂ ಟೀಂನ ನಾಯಕರಾದ ಸಫ್ವಾನ್ ಚಿಕ್ಕಮಂಗಳೂರು,ಶರೀಫ್ ಕೊಡಗು ಹಾಗೂ ರಾಜ್ಯ ನಾಯಕರು ಭಾಗವಹಿಸಲಿದ್ದಾರೆ ಎಂದು ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News