ಸರಕಾರದಿಂದ ಚೀನಾ ಬಿಕ್ಕಟ್ಟು ಕುರಿತು ಸಂಸತ್ತಿನಲ್ಲಿ ಹೇಳಿಕೆಯ ಸಾಧ್ಯತೆ

Update: 2020-09-13 14:40 GMT

ಹೊಸದಿಲ್ಲಿ,ಸೆ.13: ಸರಕಾರವು ಚೀನಾ ಬಿಕ್ಕಟ್ಟು ಕುರಿತು ಸಂಸತ್ತಿನಲ್ಲಿ ಹೇಳಿಕೆ ನೀಡುವ ಸಾಧ್ಯತೆಗಳಿವೆ ಎಂದು ಬಲ್ಲ ಮೂಲಗಳು ತಿಳಿಸಿವೆ.

ಸಂಸತ್ತಿನ ಮುಂಗಾರು ಅಧಿವೇಶನ ಸೋಮವಾರದಿಂದ ಆರಂಭಗೊಳ್ಳಲಿದೆ. ಅಧಿವೇಶನದಲ್ಲಿ ಕಲಾಪಗಳ ಕಾರ್ಯಸೂಚಿ ಬಗ್ಗೆ ಚರ್ಚಿಸಲು ರವಿವಾರ ನಡೆದ ಸಂಸತ್ತಿನ ಕಲಾಪ ಸಲಹಾ ಸಮಿತಿಯ ಸಭೆಯಲ್ಲಿ ಈ ವಿಷಯ ಪ್ರಸ್ತಾಪಗೊಂಡಿತ್ತು.

  ಪೂರ್ವ ಲಡಾಖ್‌ನ ವಾಸ್ತವ ನಿಯಂತ್ರಣ ರೇಖೆಯಲ್ಲಿ ಚೀನಾದೊಂದಿಗೆ ಬಿಕ್ಕಟ್ಟು ಕುರಿತಂತೆ ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ಸರಕಾರದ ವಿರುದ್ಧ ನಿರಂತರ ದಾಳಿಯನ್ನು ನಡೆಸುತ್ತಿದ್ದಾರೆ.

ಪ್ಯಾಂಗಾಂಗ್ ಲೇಕ್ ಮತ್ತು ಇತರ ಪ್ರದೇಶಗಳಲ್ಲಿ ಚೀನಿ ಸೈನಿಕರ ಅತಿಕ್ರಮ ಪ್ರವೇಶದ ಘಟನೆಗಳು ಹೆಚ್ಚುತ್ತಲೇ ಇದ್ದು, ಗಡಿಯಲ್ಲಿ ಉದ್ವಿಗ್ನತೆಯೂ ಹೆಚ್ಚುತ್ತಿದೆ. ಈ ಸ್ಥಿತಿಯಲ್ಲಿ ಚೀನಾ ಬಿಕ್ಕಟ್ಟಿನ ಕುರಿತು ಸಂಸತ್ತಿನಲ್ಲಿ ಚರ್ಚೆಯಿಂದ ನುಣುಚಿಕೊಳ್ಳುವುದು ಸರಕಾರಕ್ಕೆ ಕಷ್ಟವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News