ಹಾಲಿ ವಿಶ್ವ ವ್ಯವಸ್ಥೆಗೆ ರಶ್ಯ, ಚೀನಾ ಪ್ರಮುಖ ಸವಾಲು: ಬ್ರಿಟನ್ ಬೇಹುಗಾರಿಕೆ ಇಲಾಖೆ

Update: 2020-09-13 17:49 GMT

 ಲಂಡನ್, ಸೆ. 13: ರಶ್ಯ ಮತ್ತು ಚೀನಾಗಳು ಹಾಲಿ ವಿಶ್ವ ವ್ಯವಸ್ಥೆಗೆ ಎದುರಾಗಿರುವ ಪ್ರಮುಖ ಸವಾಲುಗಳಾಗಿವೆ ಎಂದು ಬ್ರಿಟನ್‌ನ ರಕ್ಷಣಾ ಬೇಹುಗಾರಿಕೆ ಇಲಾಖೆಯ ಮುಖ್ಯಸ್ಥರು ರವಿವಾರ ಅಭಿಪ್ರಾಯಪಟ್ಟಿದ್ದಾರೆ. ಈ ದೇಶಗಳು ಯಾವುದೇ ನೇರ ಸಂಘರ್ಷದಲ್ಲಿ ತೊಡಗದೆ ಹಾಗೂ ಯುದ್ಧ ಮತ್ತು ಶಾಂತಿ ಸಮಯಗಳ ನಡುವಿನ ತಟಸ್ಥ ವಲಯದಲ್ಲಿ ಕಾರ್ಯಾಚರಿಸುತ್ತಾ ತಮ್ಮ ಉದ್ದೇಶವನ್ನು ಸಾಧಿಸಿಕೊಳ್ಳುತ್ತವೆ ಎಂದು ಲೆಫ್ಟಿನೆಂಟ್ ಜನರಲ್ ಜಿಮ್ ಹಾಕನ್‌ಹಲ್ ಹೇಳಿದರು.

ಬ್ರಿಟನ್‌ನ ವಿರೋಧಿಗಳು ಕಾರ್ಯಾಚರಣೆಯ ಹೊಸ ಹೊಸ ವಿಧಾನಗಳನ್ನು ಅಭಿವೃದ್ಧಿಪಡಿಸಿಕೊಳ್ಳುತ್ತಿದ್ದಾರೆ ಹಾಗೂ ಇದಕ್ಕಾಗಿ ಕೃತಕ ಬುದ್ಧಿಮತ್ತೆ ಮತ್ತು ಮಶೀನ್ ಲರ್ನಿಂಗ್ ಮುಂತಾದ ಅತ್ಯಾಧುನಿಕ ತಂತ್ರಜ್ಞಾನವನ್ನೊಳಗೊಂಡ ಸೇನಾ ಸೌಕರ್ಯಗಳನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News