ಕೈಕಂಬ: ಎಸ್ಕೆಎಸ್ಸೆಸ್ಸೆಫ್ ವಿಖಾಯ ರಕ್ತದಾನಿ ಬಳಗದಿಂದ ರಕ್ತದಾನ ಶಿಬಿರ

Update: 2020-09-14 06:10 GMT

ಗುರುಪುರ ಸ.13. ಎಸ್ಕೆಎಸ್ಸೆಸ್ಸೆಫ್ ವಿಖಾಯ ದ.ಕ ಜಿಲ್ಲಾ ಹಾಗೂ ಎಸ್ಕೆಎಸ್ಸೆಸ್ಸೆಫ್ ವಿಖಾಯ ರಕ್ತದಾನಿ ಬಳಗ ಕೈಕಂಬ ವಲಯ, ಎಸ್ಕೆಎಸ್ಸೆಸ್ಸೆಫ್ ಕೈಕಂಬ ವಲಯ ಇದರ ಅಶ್ರಯದಲ್ಲಿ ಕೆಎಂಸಿ ಆಸ್ಪತ್ರೆ ಮಂಗಳೂರು, ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ ಇದರ ಸಹಭಾಗಿತ್ವದಲ್ಲಿ ವಿಖಾಯ ಡೇ ಪ್ರಚಾರಾರ್ಥ ರಕ್ತದಾನ ಶಿಬಿರವು ಕೈಕಂಬ ಪ್ರೀಮಿಯರ್ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮಕ್ಕೆ ಎಸ್ಕೆಎಸ್ಸೆಸ್ಸೆಫ್ ದ.ಕ ಜಿಲ್ಲಾ ಅಧ್ಯಕ್ಷ ಸೈಯ್ಯಿದ್ ಅಮೀರ್ ತಂಙಳ್ ದುಆ ಮೂಲಕ ಚಾಲನೆ ನೀಡಿದರು. ಎಸ್ಕೆಎಸ್ಸೆಸ್ಸೆಫ್ ದ.ಕ ಜಿಲ್ಲಾ  ಸಮಿತಿ ಸಂಘಟನಾ ಕಾರ್ಯದರ್ಶಿ ಆರಿಫ್ ಬಡಕಬೈಲು ಸ್ವಾಗತಿಸಿದರು. ಎಸ್ಕೆಎಸ್ಸೆಸ್ಸೆಫ್ ಬಂಟ್ವಾಳ ವಲಯ ಅಧ್ಯಕ್ಷ ಇರ್ಷಾದ್ ದಾರಿಮಿ ಅಲ್-ಜಝರಿ, ಮಿತ್ತಬೈಲ್ ಉದ್ಘಾಟಿಸಿದರು. ಕೈಕಂಬ ವಲಯ ಅಧ್ಯಕ್ಷ ಜಮಾಲುದ್ದೀನ್ ದಾರಿಮಿ ಸಭೆಯ ಅಧ್ಯಕ್ಷತೆಯನ್ನು ವಹಿಸಿದರು. ಎಸ್ಕೆಎಸ್ಸೆಸ್ಸೆಫ್ ವಿಖಾಯ ದ.ಕ ಜಿಲ್ಲಾ ಉಸ್ತುವಾರಿ ಇಸಾಕ್ ಹಾಜಿ ತೋಡಾರ್ ಪ್ರಾಸ್ತಾವಿಕ ಭಾಷಣ ಮಾಡಿದರು.

ಎಸ್ಕೆಎಸ್ಸೆಸ್ಸೆಫ್ ಕೇಂದ್ರ ಸಮಿತಿಯ ಕಾರ್ಯದರ್ಶಿ ಖಾಸಿಂ ದಾರಿಮಿ ಸವಣೂರು ವಿಖಾಯ ನಡೆಸುತ್ತಿರುವ ಸಾಮಾಜಿಕ ಧಾರ್ಮಿಕ ಕಾರ್ಯಗಳ ಬಗ್ಗೆ ವಿವರಿಸಿದರು. ವಿಖಾಯ ರಕ್ತದಾನಿ ಬಳಗ ದ.ಕ ಜಿಲ್ಲಾ ಉಸ್ತುವಾರಿ ತಾಜುದ್ದೀನ್ ಟರ್ಲಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಎಸ್ಕೆಎಸ್ಸೆಸ್ಸೆಫ್ ದ.ಕ  ಜಿಲ್ಲಾ ಕೋಶಾಧಿಕಾರಿ ಹನೀಫ್ ದೂಮಳಿಕೆ, ಉಪಾಧ್ಯಕ್ಷ ಸಿದ್ದೀಖ್ ಅಬ್ದುಲ್ ಖಾದರ್ ಬಂಟ್ವಾಳ, ಎಸ್ಕೆಎಸ್ಸೆಸ್ಸೆಫ್ ವಿಖಾಯ ದ.ಕ ಜಿಲ್ಲಾ ಕೋ-ಆರ್ಡಿನೇಟರ್ ಮುಸ್ತಫ ಕಟ್ಟದಪಡ್ಪು, ವಿಖಾಯ ಕೈಕಂಬ ವಲಯ ಚಯರ್ಮ್ಯಾನ್ ಇಬ್ರಾಹಿಂ ಕುಕ್ಕಟ್ಟೆ, ಜನರಲ್ ಕನ್ವೀನರ್ ಸಾದಿಕ್ ಗಂಜಿಮಟ, ಅಲ್ ಬಿರ್ರ್ ಕರ್ನಾಟಕ ರಾಜ್ಯ ಕೋ ಆರ್ಡಿನೇಟರ್ ಅಕ್ಬರ್ ಅಲಿ ಅಡ್ಡೂರು, ಅಶ್ರಫ್ ಕರಾವಳಿ, ಬಶೀರ್ ಸಾಗರ್ ಅಡ್ಡೂರು, ಅಬ್ಬಾಸ್ ನಾಡಾಜೆ, ಸಿರಾಜ್ ಬಡಕಬೈಲು, ಶರೀಫ್ ಮಳಲಿ, ಅಹ್ಮದ್ ಬಾವ ಅಡ್ಡೂರು, ದಾವುದ್ ಸೈಟ್, ಇಕ್ಬಾಲ್ ಕುಕ್ಕಟ್ಟೆ, ಕಬೀರ್ ಟಿಬೆಟ್, ಆಸಿಫ್ ಆದರ್ಶ್, ನೌಷಾದ್ ಹಾಜಿ ಸೂರಲ್ಪಾಡಿ, ಸಾಹುಲ್ ಹಮೀದ್ ಹಾಜಿ ಮೆಟ್ರೊ, ಎಂ.ಹೆಚ್.ಮೊಹಿದ್ದೀನ್ ಅಡ್ಡೂರು, ಯೂಸುಫ್ ಮಜ್ದಾ, ಯುಪಿ ಇಬ್ರಾಹಿಂ, ಇಸ್ಮಾಯಿಲ್ ಡಿಲಕ್ಸ್, ರಿಯಾಜ್ ಮಿಲನ್, ಶೇಕ್ ಮೋನು ಅಡ್ಡೂರು, ಝಕರಿಯ ಹಾಜಿ ಅಡ್ಡೂರು, ಬಶೀರ್ ಪ್ಲವರ್, ಶರೀಫ್ ಹಾಜಿ ಅಲ್ ಸದಿಂ, ಹೈದರ್ ಬಿತ್ತಿಪಾದೆ, ಉಸ್ಮಾನ್ ಹಾಜಿ, ಪುತ್ತು ಮೋನು ಹಾಜಿ, ಅಬ್ದುಲ್ ಲತೀಫ್, ಹಂಝ ಮಿಸ್ರೀಯಾ, ಅಶ್ರಫ್ ಪೈಝಿ ಉಲೈಬೆಟ್ಟು, ನಿಶಾದ್ ಉದ್ದಬೆಟ್ಟು, ಅನ್ಸಾರ್ ಮಳಲಿ, ಸುಹೈಲ್ ಉದ್ದಬೆಟ್ಟು, ಝುಬೈರ್ ಫೈಝಿ ಅಂಕೋಲ, ಇಬ್ರಾಹಿಂ ನೌಶಾದ್ ದಾರಾನಿ, ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ ಇದರ ಪ್ರಧಾನ ಕಾರ್ಯದರ್ಶಿ ಸಪ್ವಾನ್ ಕಲಾಯಿ ಮುಂತಾದವರು ಅತಿಥಿಗಳಾಗಿ ಭಾಗವಹಿಸಿದ್ದರು.

ಗಂಜಿಮಠ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅಮಿತ್ ರಾಜ್ ರಕ್ತದಾನಿಗಳಿಗೆ ಅಭಿನಂದನಾ ಪತ್ರ ವಿತರಿಸಿದರು.

ಧಾರ್ಮಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಸುಲೈಮಾನ್ ಮುಸ್ಲಿಯಾರ್ ಬಡಕಬೈಲು, ಇಸ್ಮಾಯಿಲ್ ಉಲೈಬೆಟ್ಟು, ಅಬುಬಕ್ಕರ್ ಮಳಲಿ, ಬಾವುಜಿ ಹಾಜಿ ಅಡ್ಡೂರು ಇವರನ್ನು ಸನ್ಮಾನಿಸಲಾಯಿತು. ಶಿಬಿರದಲ್ಲಿ124 ಮಂದಿ ರಕ್ತದಾನ ಮಾಡಿದರು.12 ಪ್ಲಾಸ್ಮ ರಕ್ತದಾನ ಮಾಡಿದರು.

ವಿಖಾಯ ಕೈಕಂಬ ವಲಯ ವೈಸ್ ಚಯರ್ಮ್ಯಾನ್ ಕಬೀರ್ ಟಿಬೆಟ್ ಧನ್ಯವಾದ ಸಮರ್ಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News