ಅಮೆರಿಕದಲ್ಲಿ ದಾಂಧಲೆಗೈಯುತ್ತಿರುವ ಭೀಕರ ಕಾಡ್ಗಿಚ್ಚು: ಮೃತರ ಸಂಖ್ಯೆ 33ಕ್ಕೆ ಏರಿಕೆ

Update: 2020-09-14 16:44 GMT
ಸಾಂದರ್ಭಿಕ ಚಿತ್ರ

ಸೇಲಂ (ಅವೆುರಿಕ), ಸೆ. 14: ಅಮೆರಿಕದ ಪಶ್ಚಿಮ ಕರಾವಳಿಯಲ್ಲಿ ದಾಂಧಲೆಗೈಯುತ್ತಿರುವ ಭೀಕರ ಕಾಡ್ಗಿಚ್ಚಿನಿಂದಾಗಿ ಮೃತಪಟ್ಟವರ ಸಂಖ್ಯೆ ರವಿವಾರ 33ಕ್ಕೆ ಏರಿದೆ. ರಾಷ್ಟ್ರೀಯ ಹವಾಮಾನ ಇಲಾಖೆಯು ಗರಿಷ್ಠ ಮಟ್ಟದ ಅಪಾಯ ಎಚ್ಚರಿಕೆಯನ್ನು ಹೊರಡಿಸಿದ್ದು, ಒರೆಗಾನ್ ರಾಜ್ಯದಲ್ಲಿ ಮತ್ತು ಕ್ಯಾಲಿಫೋರ್ನಿಯ ರಾಜ್ಯದ ಹಲವು ಕೌಂಟಿಗಳಲ್ಲಿ ತಾಪಮಾನ ಏರುತ್ತಿದೆ ಹಾಗೂ ಗಾಳಿಯು ಬಿರುಸುಗೊಳ್ಳುತ್ತಿದೆ ಎಂದು ಎಚ್ಚರಿಸಿದೆ.

ಈ ವಲಯದಲ್ಲಿ ಈಗ ನೆಲೆಸಿರುವ ಹವಾಮಾನ ಪರಿಸ್ಥಿತಿಯು, ಈಗಾಗಲೇ ಬೆಂಕಿಯಿಂದಾಗಿ ಜರ್ಝರಿತಗೊಂಡಿರುವ ಕ್ಯಾಲಿಫೋರ್ನಿಯ, ಒರೆಗಾನ್ ಮತ್ತು ವಾಶಿಂಗ್ಟನ್ ರಾಜ್ಯಗಳಲ್ಲಿ ಹೊಸದಾಗಿ ಬೆಂಕಿ ಹುಟ್ಟಲು ಹಾಗೂ ಈಗಾಗಲೇ ಅಸ್ತಿತ್ವದಲ್ಲಿರುವ ಬೆಂಕಿಯು ವೇಗವಾಗಿ ಹರಡಲು ಪೂರಕವಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

  ಈ ವಲಯದಾದ್ಯಂತ ಹಬ್ಬುತ್ತಿರುವ ಭೀಕರ ಕಾಡ್ಗಿಚ್ಚು ಈಗಾಗಲೇ ವಿಶಾಲ ಅರಣ್ಯ ಪ್ರದೇಶಗಳು ಮತ್ತು ಪಟ್ಟಣಗಳನ್ನು ಆಪೋಶನ ತೆಗೆದುಕೊಂಡಿದೆ. ಸಾವಿರಾರು ಮನೆಗಳು ಮತ್ತು ಕಟ್ಟಡಗಳು ಸುಟ್ಟು ಹೋಗಿವೆ.

ಕಳೆದ ವಾರ ಒರೆಗಾನ್ ರಾಜ್ಯದಲ್ಲಿ ಕನಿಷ್ಠ 10 ಮಂದಿ ಮೃತಪಟ್ಟಿದ್ದಾರೆ. ಇದಕ್ಕಿಂತಲೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ಹಾಗಾಗಿ, ಮೃತರ ಸಂಖ್ಯೆ ಹೆಚ್ಚುವ ಎಲ್ಲ ಸಾಧ್ಯತೆಗಳಿವೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News