ಭಾರತದ ಆರ್ಥಿಕತೆ ಶೇ.9ರಷ್ಟು ಕುಗ್ಗಲಿದೆ: ಎಡಿಬಿ ವರದಿ

Update: 2020-09-15 14:06 GMT

ಹೊಸದಿಲ್ಲಿ,ಸೆ.15: ಆರ್ಥಿಕ ಚಟುವಟಿಕೆಗಳು ಮತ್ತು ಬಳಕೆದಾರ ಭಾವನೆಗಳ ಮೇಲೆ ಕೊರೋನ ವೈರಸ್ ಸಾಂಕ್ರಾಮಿಕದ ತೀವ್ರ ಪರಿಣಾಮದಿಂದಾಗಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕ ಬೆಳವಣಿಗೆಯು ಶೇ.9ರಷ್ಟು ಕುಗ್ಗಲಿದೆ ಎಂದು ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ ತನ್ನ ‘2020ರ ಮುನ್ನೋಟ ’ ವರದಿಯಲ್ಲಿ ಹೇಳಿದೆ.

2021-22ನೇ ಸಾಲಿನಲ್ಲಿ ಭಾರತೀಯ ಆರ್ಥಿಕತೆಯ ಪ್ರಬಲ ಚೇತರಿಕೆಯನ್ನು ಅಂದಾಜಿಸಿರುವ ಎಡಿಬಿ,ಚಲನಶೀಲತೆ ಮತ್ತು ಉದ್ಯಮ ಚಟುವಟಿಕೆಗಳು ವ್ಯಾಪಕವಾಗಿ ಪುನರಾರಂಭಗೊಂಡಿರುವುದರಿಂದ ಜಿಡಿಪಿಯು ಶೇ.8ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ ಎಂದು ತಿಳಿಸಿದೆ. ಕೊರೋನ ವೈರಸ್ ಹರಡುವಿಕೆಯನ್ನು ನಿಯಂತ್ರಿಸಲು ಭಾರತವು ಕಟ್ಟುನಿಟ್ಟಿನ ಲಾಕ್‌ಡೌನ್ ಕ್ರಮಗಳನ್ನು ಕೈಗೊಂಡಿತ್ತು ಮತ್ತು ಇದು ಆರ್ಥಿಕ ಚಟುವಟಿಕೆಗಳ ಮೇಲೆ ಗಂಭೀರ ಪರಿಣಾಮಗಳನ್ನು ಬೀರಿತ್ತು ಎಂದು ವರದಿಯಲ್ಲಿ ಹೇಳಿರುವ ಎಡಿಬಿಯ ಮುಖ್ಯ ಆರ್ಥಿಕ ತಜ್ಞ ಯಸುಯಿಕಿ ಸವಾಡಾ ಅವರು,ಕೋವಿಡ್-19 ಹರಡುವಿಕೆಯನ್ನು ನಿಲ್ಲಿಸಲು ಮತ್ತು ಮುಂದಿನ ಹಣಕಾಸು ವರ್ಷ ಹಾಗೂ ಅದರಾಚೆಗೆ ಆರ್ಥಿಕ ಚೇತರಿಕೆಗೆ ಸುಸ್ಥಿರ ವೇದಿಕೆಯನ್ನೊದಗಿಸಲು ಹೆಚ್ಚಿನ ಪರೀಕ್ಷೆ,ಸಂಪರ್ಕಗಳ ಪತ್ತೆ ಹಚ್ಚುವಿಕೆ ಮತ್ತು ಚಿಕಿತ್ಸಾ ಸಾಮರ್ಥ್ಯಗಳನ್ನು ಹೆಚ್ಚಿಸುವಂತಹ ನಿಯಂತ್ರಣ ಕ್ರಮಗಳನ್ನು ನಿರಂತರವಾಗಿ ಮತ್ತು ಪರಿಣಾಮಕಾರಿಯಾಗಿ ಅನುಷ್ಠಾನಿಸುವುದು ನಿರ್ಣಾಯಕವಾಗಿದೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News