ಮೆಸ್ಸಿ ಇನ್ನೂ ವಿಶ್ವದ ಶ್ರೀಮಂತ ಫುಟ್ಬಾಲ್ ಆಟಗಾರ!

Update: 2020-09-15 18:20 GMT

ಲಂಡನ್, : ಬಾರ್ಸಿಲೋನದಿಂದ ದೂರ ಉಳಿಯಲು ಬಯಸಿರುವ ಅರ್ಜೆಂಟೀನಫುಟ್ಬಾಲ್‌ನ ಸ್ಟಾರ್ ಆಟಗಾರ ಲಿಯೊನೆಲ್ ಮೆಸ್ಸಿ ಪ್ರಸಕ್ತ ಸಾಲಿನಲ್ಲಿ ವಿಶ್ವದ ಅತ್ಯಂತ ಶ್ರೀಮಂತ ಫುಟ್ಬಾಲ್ ಆಟಗಾರನಾಗಿ ಮುಂದುವರಿದಿದ್ದಾರೆ.

ಫೋರ್ಬ್ಸ್ ಪ್ರಕಟಿಸಿರುವ ಪಟ್ಟಿಯ ಪ್ರಕಾರ ಈ ವರ್ಷ ಮೆಸ್ಸಿಯ ಒಟ್ಟು ಗಳಿಕೆ 126 ಮಿಲಿಯನ್ ಡಾಲರ್(927,26,36,100.00 ರೂ.) ವೇತನದಿಂದ ಬಂದಿರುವ ಆದಾಯ 92 ಮಿಲಿಯನ್ ಮತ್ತು ಜಾಹೀರಾತು ಸೇರಿದಂತೆ ಇತರ ಮೂಲಗಳಿಂದ 34 ಮಿಲಿಯನ್ ಯುಎಸ್ ಡಾಲರ್ ಆದಾಯ ಪಡೆದಿದ್ದಾರೆ. ಪೋರ್ಚುಗಲ್‌ನ ಸ್ಟಾರ್ ಆಟಗಾರ, ಜುವೆಂಟ್ಸ್‌ನ ಕ್ರಿಸ್ಟಿಯಾನೊ ರೊನಾಲ್ಡೊ ಎರಡನೇ ಸ್ಥಾನದಲ್ಲಿದ್ದಾರೆ. ಅವರ ಆದಾಯ 117 ಮಿಲಿಯನ್ ಡಾಲರ್. ಸೋಷಿಯಲ್ ಮೀಡಿಯಾದಲ್ಲಿ ವಿಶ್ವದಲ್ಲೇ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಸಾಕರ್ ಆಟಗಾರ ರೊನಾಲ್ಡೊ .

96 ಮಿಲಿಯನ್ ಡಾಲರ್ ಆದಾಯ ಹೊಂದಿರುವ ಬ್ರೆಝಿಲ್‌ನ ನೆಮರ್ ಫೋರ್ಬ್ಸ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ನೆಮರ್ ಅವರ ಪ್ಯಾರಿಸ್ ಸೈಂಟ್ ಜರ್ಮೈನ್ ತಂಡದ ಸಹ ಆಟಗಾರ 21ರ ಹರೆಯದ ಕೈಲಿಯನ್ ಬಾಪೆ ( 42 ಮಿಲಿಯನ್ ಡಾಲರ್)ನಾಲ್ಕನೇ ಸ್ಥಾನದಲ್ಲಿದ್ದಾರೆ. ಲಿವರ್‌ಪೂಲ್‌ನ ಸ್ಟ್ರೈಕರ್ ಮುಹಮ್ಮದ್ ಸಲಾಹ್ ( 37 ಮಿಲಿಯನ್ ಡಾಲರ್)ಐದನೇ ಸ್ಥಾನದಲ್ಲಿ ಮತ್ತು ಮ್ಯಾಂಚೆಸ್ಟರ್ ಯುನೈಟೆಡ್‌ನ ಮಿಡ್‌ಫೀಲ್ಡರ್ ಪಾಲ್ ಪೊಗ್ಬಾ ( 34 ಮಿಲಿಯನ್ ಡಾಲರ್) ಆರನೇ ಸ್ಥಾನದಲ್ಲಿದ್ದಾರೆ. ಪೊಗ್ಬಾ ತಂಡದ ಸಹ ಆಟಗಾರ ಗೋಲ್ ಕೀಪರ್ ಡೇವಿಡ್ ಡಿ ಗಿಯಾ (27 ಮಿಲಿಯನ್ ಡಾಲರ್) 10ನೇ ಸ್ಥಾನ, ಬಾರ್ಸಿಲೋನ ತಂಡದ ದ ಆಂಟೊಯಿನ್ ಗ್ರಿಜ್ಮನ್ (33 ಮಿಲಿಯನ್ ಡಾಲರ್) 7ನೇ ಮತ್ತು ರಿಯಲ್ ಮ್ಯಾಡ್ರಿಡ್‌ನ ಗರೆಥ್ ಬೇಲ್ (29 ಮಿಲಿಯನ್ ಡಾಲರ್) 8ನೇ ಮತ್ತು ಬೇಯರ್ನ್ ಮ್ಯೂನಿಚ್‌ನ ಸ್ಟ್ರೈಕರ್ ರಾಬರ್ಟ್ ಲೆವಾಂಡೋವಿಸ್ಕಿ (28 ಮಿಲಿಯನ್ ಡಾಲರ್) ಅವರು ವಿಶ್ವದ ಶ್ರೀಮಂತ ಫುಟ್ಬಾಲ್ ಆಟಗಾರರ ಪಟ್ಟಿಯಲ್ಲಿ 9ನೇ ಸ್ಥಾನ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News