ಪ್ಯಾಂಗೊಂಗ್‌ನಲ್ಲಿ 100-200 ಸುತ್ತುಗಳ ಎಚ್ಚರಿಕೆ ಗುಂಡುಗಳನ್ನು ಹಾರಿಸಿದ್ದ ಭಾರತ-ಚೀನಾ ಸೈನಿಕರು

Update: 2020-09-16 05:43 GMT

ಹೊಸದಿಲ್ಲಿ, ಸೆ.16: ಸೆಪ್ಟಂಬರ್ ಆರಂಭದಲ್ಲಿ ಪ್ಯಾಂಗೊಂಗ್ ಸರೋವರದ ಉತ್ತರ ದಂಡೆಯಲ್ಲಿ ಭಾರತೀಯ ಹಾಗೂ ಚೀನಾದ ಸೈನಿಕರು 100-200 ಸುತ್ತುಗಳ ಎಚ್ಚರಿಕೆ ಗುಂಡುಗಳನ್ನು ಹಾರಿಸಿದ್ದರು ಎಂದು ಮೂಲಗಳು ತಿಳಿಸಿವೆ.

ಚೀನಾದ ಸೈನಿಕರನ್ನು ಕಡೆಗಣಿಸಿ ಪೋಸ್ಟ್ ಸ್ಥಾಪಿಸಲು ಭಾರತೀಯ ಸೈನಿಕರು ಪ್ರಮುಖ ಕ್ರಮಗಳನ್ನು ಕೈಗೊಂಡಾಗ ಈ ಘಟನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಭಾರತ ಪ್ರಸ್ತುತ ಫಿಂಗರ್ 3-4ರ ಸಮೀಪದಲ್ಲಿದೆ.

ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಹಾಗೂ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಸೆಪ್ಟಂಬರ್ 10 ರಂದು ಮಾಸ್ಕೊದಲ್ಲಿ ಸಭೆ ನಡೆಸುವ ಮೊದಲು ಈ ಘಟನೆ ನಡೆದಿದೆ. ತಮ್ಮ ಮಾತುಕತೆಯನ್ನು ಮುಂದುವರಿಸಲು, ಸರಿಯಾದ ಅಂತರವನ್ನು ಕಾಯ್ದುಕೊಳ್ಳಲು, ಉದ್ವಿಗ್ನತೆಯನ್ನು ತಿಳಿಗೊಳಿಸುವ ಹಾಗೂ ಹೊಸ ವಿಶ್ವಾಸವನ್ನು ಬೆಳಸುವ ಕ್ರಮಗಳತ್ತ ಕೆಲಸ ಮಾಡುವುದು ಸೇರಿದಂತೆ ಐದು ಅಂಶಗಳ ಯೋಜನೆಯ ಕುರಿತು ಸಭೆಯ ಬಳಿಕ ಉಭಯ ದೇಶಗಳು ಜಂಟಿ ಹೇಳಿಕೆಯಲ್ಲಿ ಪ್ರಕಟಿಸಿದ್ದವು.

 ಕಳೆದ ವಾರ ನಡೆದ ಮತ್ತೊಂದು ಘಟನೆಯಲ್ಲಿ ಚೀನಾ ದಕ್ಷಿಣದ ಲಡಾಖ್‌ನ ಪ್ಯಾಂಗೊಂಗ್ ಸರೋವರದ ಭಾರತೀಯ ಸ್ಥಾನಗಳನ್ನು ಸಮೀಪಿಸಲು ಪ್ರಯತ್ನಿಸಿತ್ತು ಹಾಗೂ ಗಾಳಿಯಲ್ಲಿ ಗುಂಡು ಹಾರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News