ವಿಶ್ವದ ಅತ್ಯಂತ ಉದ್ದದ ಹೆದ್ದಾರಿ ಸುರಂಗ ಉದ್ಘಾಟನೆಗೆ ಸಿದ್ಧ

Update: 2020-09-16 06:41 GMT

ಮನಾಲಿ(ಹಿಮಾಚಲಪ್ರದೇಶ), ಸೆ.16: ವಿಶ್ವದ ಅತಿ ಉದ್ದದ ಹೆದ್ದಾರಿ ಸುರಂಗವಾಗಿರುವ ಮನಾಲಿಯನ್ನು ಲೇಹ್‌ನೊಂದಿಗೆ ಸಂಪರ್ಕಿಸುವ ಅಟಲ್ ಸುರಂಗದ ನಿರ್ಮಾಣವು 10 ವರ್ಷಗಳ ಅವಧಿಯಲ್ಲಿ ಪೂರ್ಣಗೊಂಡಿದೆ.

‘‘ಮನಾಲಿಯನ್ನು ಲೇಹ್‌ಗೆ ಸಂಪರ್ಕಿಸುವ ಅಟಲ್ ಸುರಂಗವು 10,000 ಅಡಿಗಳಿಗಿಂತ ಹೆಚ್ಚು ಉದ್ದದ ವಿಶ್ವದ ಅತ್ಯಂತ ಉದ್ದದ ಹೆದ್ದಾರಿ ಸುರಂಗವಾಗಿದೆ. ಈ ಸುರಂಗವನ್ನು ಪೂರ್ಣಗೊಳಿಸಲು ಅಂದಾಜು ಅವಧಿ ಆರು ವರ್ಷಗಳಿಗಿಂತ ಕಡಿಮೆ ಇತ್ತು. ಆದರೆ ಇದು 10 ವರ್ಷಗಳಲ್ಲಿ ಪೂರ್ಣಗೊಂಡಿದೆ ಎಂದು ಮುಖ್ಯ ಎಂಜಿನಿಯರ್ ಕೆ.ಪಿ. ಪುರುಷೋತ್ತಮನ್ ಹೇಳಿದ್ದಾರೆ.

‘‘ಪ್ರತಿ 60 ಮೀಟರ್‌ಗೆ ಸಿಸಿಟಿವಿ ಕ್ಯಾಮರಾಗಳು ಹಾಗೂ ಸುರಂಗದ ಒಳಗೆ ಪ್ರತಿ 500 ಮೀಟರ್ ಗೆ ತುರ್ತು ನಿರ್ಗಮನ ಸುರಂಗಗಳಿವೆ. ಸುರಂಗವು ಮನಾಲಿ ಹಾಗೂ ಲೇಹ್ ನಡುವಿನ ಅಂತರವನ್ನು 46 ಕಿಲೋ ಮೀಟರ್‌ಗಳಷ್ಟು ಕಡಿಮೆ ಮಾಡುತ್ತದೆ ಹಾಗೂ ನಾಲ್ಕು ಗಂಟೆಗಳ ಉಳಿತಾಯ ಮಾಡಬಹುದು''ಎಂದು ಪುರುಷೋತ್ತಮನ್ ಹೇಳಿದ್ದಾರೆ.

"ಯಾವುದೇ ಬೆಂಕಿ ಅವಘಡ ಸಂಭವಿಸಿದಲ್ಲಿ ಉಪಯೋಗಕ್ಕೆ ಬರುವ ಫೈಯರ್ ಹೈ ಡ್ರಾಂಟ್‌ಗಳನ್ನು ಸುರಂಗದೊಳಗೆ ಸ್ಥಾಪಿಸಲಾಗಿದೆ. ನಿರ್ಮಾಣ ಹಂತದಲ್ಲಿದ್ದಾಗ ಸಾಕಷ್ಟು ಸವಾಲುಗಳನ್ನು ಎದುರಿಸಿದ್ದೇವೆ. ಒಗ್ಗಟ್ಟಿನಿಂದ ನಾವು ಅದರ ನಿರ್ಮಾಣವನ್ನು ಪೂರ್ಣಗೊಳಿಸಲು ಸಾಧ್ಯವಾಯಿತು. ಸುರಂಗದ ಅಗಲವು 10.5 ಮೀಟರ್, ಇದರಲ್ಲಿ ಎರಡೂ ಕಡೆಯಲ್ಲಿನ 1 ಮೀಟರ್‌ನ ಫುಟ್‌ಪಾತ್ ಕೂಡ ಸೇರಿದೆ'' ಎಂದು ಪುರುಷೋತ್ತಮನ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News