ಜಗತ್ತಿನಲ್ಲಿ ಅತ್ಯಂತ ಅಪಾರದರ್ಶಕ ನಿಧಿ ‘ಪಿಎಂ ಕೇರ್-ಲೆಸ್ ಫಂಡ್': ಟಿಎಂಸಿ ಸಂಸದ ಒ’ಬ್ರಿಯಾನ್ ವ್ಯಂಗ್ಯ

Update: 2020-09-16 12:52 GMT

ಹೊಸದಿಲ್ಲಿ: “ಕೋವಿಡ್-19 ವಿರುದ್ಧದ ಹೋರಾಟದಲ್ಲಿ ರಾಜ್ಯಗಳೊಂದಿಗೆ ಕೈಜೋಡಿಸಲು ಕೇಂದ್ರಕ್ಕೆ ವಿನಮ್ರತೆಯ ಅಗತ್ಯವಿದೆ. ಆದರೆ ಒಂದು ಪ್ರಜಾಪ್ರಭುತ್ವವನ್ನು  ನಿರಂಕುಶಪ್ರಭುತ್ವಕ್ಕೆ ಪರಿವರ್ತಿಸಲು ಒಂದು ಸಾಂಕ್ರಾಮಿಕವನ್ನು ನೀವು ಬಳಸಿಕೊಳ್ಳಬಾರದು'' ಎಂದು ರಾಜ್ಯಸಭೆಯಲ್ಲಿ ಕೋವಿಡ್ ಕುರಿತ ಚರ್ಚೆ ವೇಳೆ ಕೇಂದ್ರ ಸರಕಾರವನ್ನು ತೃಣಮೂಲ ಸಂಸದ ಡೆರೆಕ್ ಒ'ಬ್ರಿಯಾನ್ ತರಾಟೆಗೆ ತೆಗೆದುಕೊಂಡಿದ್ದಾರೆ.

“ಸರಕಾರ ಕೇವಲ ನಾಲ್ಕು ತಾಸುಗಳ ಮುನ್ಸೂಚನೆಯೊಂದಿಗೆ 21 ದಿನಗಳ ಲಾಕ್ ಡೌನ್ ಹೇರಿತು. ಅಷ್ಟೇ ಅಲ್ಲದೆ ಕೋವಿಡ್ ಸಾಂಕ್ರಾಮಿಕಕ್ಕೆ ಸಂಬಂಧಿಸಿದ ತೀರ್ಮಾನಗಳನ್ನು ಕೈಗೊಳ್ಳುವಲ್ಲಿ ಕೇಂದ್ರವು ರಾಜ್ಯ ಸರಕಾರಗಳನ್ನು ವಿಶ್ವಾಸಕ್ಕೆ ಪಡೆದುಕೊಂಡಿರಲಿಲ್ಲ'' ಎಂದು ಅವರು ಆರೋಪಿಸಿದರು.

“ಈ ಜಗತ್ತಿನಲ್ಲಿ ಅತ್ಯಂತ ಅಪಾರದರ್ಶಕ ಹಾಗೂ ಕತ್ತಲಿನಲ್ಲಿರುವ ನಿಧಿಯೊಂದಿದೆ. ಅದನ್ನು ಪ್ರೈಮ್ ಮಿನಿಸ್ಟರ್ಸ್ ಕುಡನ್ಟ್ ಕೇರ್-ಲೆಸ್ ಫಂಡ್''  ಎಂದು ಪಿಎಂ ಕೇರ್ಸ್ ಕುರಿತು ವ್ಯಂಗ್ಯವಾಡಿದ ಸಂಸದ ನಂತರ , “ಓಹ್ ನಾನು ಹೆಸರನ್ನು ತಪ್ಪಾಗಿ ಹೇಳಿದೆ'' ಎಂದು ಉದ್ಗರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News