ಬೈಡನ್‌ಗೆ 66 ಶೇಕಡ ಭಾರತೀಯ ಅಮೆರಿಕನ್ನರ ಬೆಂಬಲ: ಸಮೀಕ್ಷೆಯಲ್ಲಿ ಬಹಿರಂಗ

Update: 2020-09-16 15:19 GMT

ವಾಶಿಂಗ್ಟನ್, ಸೆ. 16: ಈಗಿನ ಮಟ್ಟಿಗೆ 66 ಶೇಕಡ ಭಾರತೀಯ ಅಮೆರಿಕನ್ನರು ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡನ್‌ಗೆ ಪರವಾಗಿದ್ದಾರೆ ಹಾಗೂ ಕೇವಲ 28 ಶೇಕಡ ಮಂದಿ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರನ್ನು ಸಮರ್ಥಿಸುತ್ತಿದ್ದಾರೆ ಎಂದು ಮಂಗಳವಾರ ಬಿಡುಗಡೆ ಮಾಡಲಾದ ಸಮೀಕ್ಷೆಯೊಂದು ತಿಳಿಸಿದೆ.

ಜಾಗತಿಕ ಭಾರತೀಯ ವಲಸಿಗರ ಸಂಘಟನೆಯ ಸದಸ್ಯ ‘ಇಂಡಿಯಾಸ್ಪೋರ’ ಮತ್ತು ‘ಏಶ್ಯನ್ ಅಮೆರಿಕನ್ ಪೆಸಿಫಿಕ್ ಐಲ್ಯಾಂಡರ್ಸ್‌ (ಎಎಪಿಐ) ಡೇಟಾ’ ಸಂಘಟನೆಗಳು, ಮುಂಬರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಭಾರತೀಯ ಅಮೆರಿಕನ್ ಮತದಾರರ ಒಲವುಗಳಿಗೆ ಸಂಬಂಧಿಸಿದ ತಮ್ಮ ಜಂಟಿ ವರದಿಯನ್ನು ಮಂಗಳವಾರ ಬಿಡುಗಡೆ ಮಾಡಿವೆ.

‘‘ಬೈಡನ್ ಪರವಾಗಿ 66 ಶೇಕಡ ಭಾರತೀಯ ಅಮೆರಿಕನ್ನರು ಒಲವು ವ್ಯಕ್ತಪಡಿಸಿದ್ದಾರೆ ಹಾಗೂ 28 ಶೇಕಡ ಮಂದಿ ಅಧ್ಯಕ್ಷ ಟ್ರಂಪ್‌ಗೆ ಬೆಂಬಲ ಸೂಚಿಸಿದ್ದಾರೆ. 6 ಶೇಕಡ ಮಂದಿ ಇನ್ನೂ ನಿರ್ಧರಿಸಿಲ್ಲ. 2016ರ ಅಧ್ಯಕ್ಷೀಯ ಚುನಾವಣೆಯಲ್ಲಿ 77 ಶೇಕಡ ಭಾರತೀಯ ಅಮೆರಿಕನ್ನರು ಡೆಮಾಕ್ರಟಿಕ್ ಅಭ್ಯರ್ಥಿ ಹಿಲರಿ ಕ್ಲಿಂಟನ್‌ಗೆ ಬೆಂಬಲ ವ್ಯಕ್ತಪಡಿಸಿದ್ದರು ಹಾಗೂ 16 ಶೇಕಡ ಮಂದಿ ಟ್ರಂಪ್ ಪರ ಒಲವು ಹೊಂದಿದ್ದರು. ಇನ್ನೂ ನಿರ್ಧಾರ ತೆಗೆದುಕೊಳ್ಳದವರು ಈಗಾಗಲೇ ನಿರ್ಧಾರ ತೆಗೆದುಕೊಂಡಿರುವವರ ಪ್ರಮಾಣದಲ್ಲೇ ವಿಭಜನೆಯಾದರೆ, ಬೈಡನ್ 70 ಶೇಕಡ ಹಾಗೂ ಟ್ರಂಪ್‌ಗೆ 30 ಶೇಕಡ ಮತಗಳು ಬೀಳಲಿವೆ’’ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News