ಯುನಿವೆಫ್ ಕರ್ನಾಟಕ ಶೇಖ್ ಅಹ್ಮದ್ ಸರ್ ಹಿಂದಿ ಪ್ರಬಂಧ ಸ್ಪರ್ಧೆ

Update: 2020-09-17 09:47 GMT

ಮಂಗಳೂರು, ಸೆ.17: ನಾಡು, ನುಡಿ, ಭಾಷೆ, ಸಮುದಾಯ ಮತ್ತು ಸಮಾಜದ ಒಳಿತು ಹಾಗೂ ಪ್ರಗತಿಗಾಗಿ, ಯಾವುದೇ ರೀತಿಯ ಪ್ರತಿಫಲಾಪೇಕ್ಷೆಯಿಲ್ಲದೆ, ಪ್ರಶಸ್ತಿ, ಪುರಸ್ಕಾರಗಳ ಆಗ್ರಹವಿಲ್ಲದೆ ಶ್ರಮಿಸುತ್ತಿರುವ ವ್ಯಕ್ತಿಯೊಬ್ಬರಿಗೆ ಯುನಿವೆಫ಼್ ಕರ್ನಾಟಕ ಪ್ರತಿ ವರ್ಷ 'ಶೇಖ್ ಅಹ್ಮದ್ ಸರ್ ಹಿಂದಿ' ಪ್ರಶಸ್ತಿಯನ್ನು ನೀಡುತ್ತಿದೆ. ಈ ಪ್ರಶಸ್ತಿಯ ಹಿನ್ನೆಲೆಯಲ್ಲಿ ‘ಶೇಖ್ ಅಹ್ಮದ್ ಸರ್ ಹಿಂದಿ’ ಎಂಬ ಮಹಾನ್ ವ್ಯಕ್ತಿತ್ವದ ಪರಿಚಯವನ್ನು ಜನಸಾಮಾನ್ಯರಿಗೂ ತಲುಪಿಸುವ ನಿಟ್ಟಿನಲ್ಲಿ ಮುಸ್ಲಿಮರಿಗಾಗಿ ಪ್ರಬಂಧ ಸ್ಪರ್ಧೆ ಏರ್ಪಡಿಸಿದೆ.

‘ಧರ್ಮದ ಪುನರುತ್ಥಾನದಲ್ಲಿ ಶೇಖ್ ಅಹ್ಮದ್ ಸರ್ ಹಿಂದಿ ಪಾತ್ರ’ ಎಂಬುದು ಪ್ರಬಂಧದ ವಿಷಯವಾಗಿದೆ. ಪ್ರಬಂಧವು ಕನ್ನಡ ಭಾಷೆಯಲ್ಲಿರಬೇಕು, ಎ4 ಕಾಗದದ ಒಂದೇ ಮಗ್ಗುಲಲ್ಲಿ 4 ಪುಟಗಳಿಗೆ ಮೀರದಂತೆ ಬರೆದಿರಬೇಕು, ಹೆಸರು, ಪೂರ್ಣ ವಿಳಾಸ, ಫೋಟೋ ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಸೆ.30ರ ಒಳಗಾಗಿ ಕಳುಹಿಸಬೇಕು. ಪ್ರಬಂಧವನ್ನು ಸಾಮಾನ್ಯ ಅಂಚೆಯಲ್ಲಿ ಕಳುಹಿಸಬೇಕು. ಸ್ಪೀಡ್ ಪೋಸ್ಟ್, ರಿಜಿಸ್ಟರ್ಡ್ ಮತ್ತು ಕೊರಿಯರ್ ನಲ್ಲಿ ಬಂದ ಅಂಚೆಗಳನ್ನು ಸ್ವೀಕರಿಸಲಾಗುವುದಿಲ್ಲ.

ವಿಜೇತರಿಗೆ ಪ್ರಥಮ ಬಹುಮಾನ 3,000 ರೂ. ಮತ್ತು ದ್ವಿತೀಯ ಬಹುಮಾನ 2000 ರೂ. ನೀಡಲಾಗುತ್ತದೆ. ಮೆಚ್ಚುಗೆ ಪಡೆದ ಪ್ರಬಂಧಗಳಿಗೆ ಪ್ರಮಾಣ ಪತ್ರ ವಿತರಿಸಲಾಗುವುದು. ಬಹುಮಾನಗಳನ್ನು ಶೇಖ್ ಅಹ್ಮದ್ ಸರ್ ಹಿಂದಿ ಪ್ರಶಸ್ತಿ ಪ್ರದಾನ ಸಮಾರಂಭದಂದು ವಿತರಿಸಲಾಗುವುದು.

 ಪ್ರಬಂಧವನ್ನು ಸರ್ ಹಿಂದಿ ಪ್ರಬಂಧ ಸ್ಪರ್ಧಾ ವಿಭಾಗ, ಯುನಿವೆಫ್ ಕರ್ನಾಟಕ, ಒಂದನೇ ಮಹಡಿ, ಲುಲು ಸೆಂಟರ್, ಫಳ್ನೀರ್, ಮಂಗಳೂರು -575 001 ಇಲ್ಲಿಗೆ ಕಳುಹಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 9945913824 ಅನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News