ಕೊರೋನ ಜಾಗೃತಿ ಚಿತ್ರಕಲಾ ಸ್ವರ್ಧೆ: ಪ್ರತಿಷ್ಠಾ ಶೇಟ್ ಪ್ರಥಮ

Update: 2020-09-17 12:26 GMT

ಶಿರ್ವ, ಸೆ.17: ಕೊರೋನಾ ವೈರಸ್ ನಿಯಂತ್ರಣ ಮಾಡುವ ಸಲುವಾಗಿ ಲಾಕ್‌ಡೌನ್ ಮಾಡಿದ ಸಂದರ್ಭದಲ್ಲಿ ಬಂಟಕಲ್ಲು ಪದ್ಮಸುಂದರಿ ಟ್ರಸ್ಟ್ ಮತ್ತು ಪ್ರಣವ ಆರ್ಟ್ಸ್ ಸ್ಕೂಲ್ ಇವರು ಯಾವುದೆ ವಯೋಮಿತಿ ಇಲ್ಲದೇ ನಡೆಸಿದ ಅನ್‌ಲೈನ್ ಚಿತ್ರಕಲಾ ಸ್ವರ್ಧೆಯಲ್ಲಿ ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಬಾಗವಹಿಸಿದ್ದರು.

ಈ ಸ್ವರ್ಧೆಯಲ್ಲಿ ಪ್ರತಿಷ್ಠಾ ಶೇಟ್ ಪ್ರಥಮ, ದೃತಿ ಎಸ್. ಮತ್ತು ಶರಣ್ಯ ಭಟ್ ದ್ವಿತೀಯ, ಹರ್ಷಿತ್ ಎಸ್.ಎಸ್. ತೃತೀಯ ಮತ್ತು ದೀಪಿಕಾ ಭಟ್ ತೃತೀಯ ಬಹುಮಾನ ಪಡೆದರು. ಸ್ವರ್ಧೆಯ ತೀರ್ಪುಗಾರರಾಗಿ ಚಿತ್ರಕಲಾಕಾರ ರಾದ ಪಿ.ಎನ್.ಆಚಾರ್ಯ, ವಿಶ್ವೇಶ್ವರ ಪರ್ಕಳ ಮತ್ತು ರಮೇಶ್ ಬಂಟಕಲ್ಲು ಸಹಕರಿಸಿದರು.

ಸ್ವರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ವಿದ್ಯಾರ್ಥಿನಿ ಪ್ರತಿಷ್ಠಾ ಶೇಟ್ ಬುಧವಾರ ಟ್ರಸ್ಟ್‌ನ ಕಾರ್ಯಾಲಯಕ್ಕೆ ಆಗಮಿಸಿ ಕಾರ್ಪೊರೇಶನ್ ಬ್ಯಾಂಕ್‌ನ ನಿವೃತ್ತ ಪ್ರಬಂಧಕ ಜಯಪ್ರಕಾಶ್ ರಾವ್ ಹೇರೂರು ಅವರಿಂದ ಬಹುಮಾನ ಸ್ವೀಕರಿಸಿದರು. ಉಳಿದಂತೆ ವಿಜೇತ ವಿದ್ಯಾರ್ಥಿಗಳಿಗೆ ಅಂಚೆಯ ಮೂಲಕ ಬಹುವಾನವನ್ನು ಕಳುಹಿಸಿ ಕೊಡಲಾಯಿತು.

ಈ ಸಂದರ್ಭದಲ್ಲಿ ಪದ್ಮಸುಂದರಿ ಟ್ರಸ್ಟ್‌ನ ಅಧ್ಯಕ್ಷ ರಮೇಶ್ ಬಂಟಕಲ್, ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿಯ ಅಧ್ಯಕ್ಷ ಮಾಧವ ಕಾಮತ್ ಉಪಸ್ಥಿತರಿದ್ದರು. ರಾಮಚಂದ್ರ ಆಚಾರ್ಯ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News