ಓಝೋನ್ ಪದರದ ಕುರಿತು ತಾಂತ್ರಿಕ ಉಪನ್ಯಾಸ

Update: 2020-09-17 12:33 GMT

ಶಿರ್ವ, ಸೆ.17: ಬಂಟಕಲ್ ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾ ಲಯದ ರಸಾಯನ ಶಾಸ್ತ್ರ ವಿಭಾಗದ ವತಿಯಿಂದ ಕಾಲೇಜಿನ ಐಎಸ್‌ಟಿಇ ಘಟಕದ ಸಹಯೋಗದೊಂದಿಗೆ ಓಝೋನ್ ಪದರದ ಸವಕಳಿ-ಪ್ರಸ್ತುತ ಸ್ಥಿತಿಗತಿಗಳು ಕುರಿತ ವೆಬಿನಾರ್(ತಾಂತ್ರಿಕ ಉಪನ್ಯಾಸ)ನ್ನು ಸೆ.16ರಂದು ಕಾಲೇಜಿನಲ್ಲಿ ಆಯೋಜಿಸಲಾಗಿತ್ತು.

ವಿಶ್ವ ಓಝೋನ್ ದಿನದ ಅಂಗವಾಗಿ ಆಯೋಜಿಸಲಾಗಿದ್ದ ಈ ಕಾರ್ಯ ಕ್ರಮದಲ್ಲಿ ಮಣಿಪಾಲದ ಇಂಟರ್‌ನ್ಯಾಷನಲ್ ಸೆಂಟರ್ ಫಾರ್ ಅಪ್ಲೈಡ್ ಸೈನ್ಸಸ್‌ನ ಸಹನಿರ್ದೇಶಕ ಡಾ.ಎ.ಗಣೇಶ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ ದರು. ಆನ್‌ಲೈನ್ ಮುಖಾಂತರ ನಡೆದ ಈ ಕಾರ್ಯ ಕ್ರಮದಲ್ಲಿ ರಾಜ್ಯದ ಮೂಲೆಮೂಲೆಗಳಿಂದ ನೂರಾರು ಬೋಧಕ ಸಿಬ್ಬಂದಿ ಮತ್ತು ಸಂಶೋನಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕಾಲೇಜಿನ ಐಎಸ್‌ಟಿಇ ಘಟಕದ ಸಂಯೋಜಕ ದೀಪಕ್ ರಾವ್, ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ರೀನಾ ಕುಮಾರಿ, ವಿಭಾಗದ ಪ್ರಾಧ್ಯಾಪಕ ಡಾ.ಸುಬ್ಬುಲಕ್ಷ್ಮಿ ಮತ್ತು ರವಿಪ್ರಭಾ ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News