ಮಲ್ಪೆಯಲ್ಲಿ ಮಹಾಲಯ ಅಮವಾಸ್ಯೆ: ಅಗಲಿದ ಪಿತೃಗಳಿಗೆ ಪಿಂಡಪ್ರದಾನ

Update: 2020-09-17 14:25 GMT

ಮಲ್ಪೆ, ಸೆ.17: ಮಹಾಲಯ ಅಮವಾಸ್ಯೆ ಪ್ರಯುಕ್ತ ಗುರುವಾರ ಉಡುಪಿಯ ಮಲ್ಪೆ, ವಡಬಾಂಡೇಶ್ವರ ಸಮುದ್ರ ಕಿನಾರೆಯಲ್ಲಿ ಅಗಲಿದ ಪಿತೃಗಳಿಗೆ ಪಿಂಡಪ್ರದಾನ ಮತ್ತು ತರ್ಪಣ ಬಿಡುವ ಕ್ರಿಯೆಯನ್ನು ಸಾವಿರಾರು ಮಂದಿ ಶ್ರದ್ಧಾಭಕ್ತಿಯಿಂದ ನೆರವೇರಿಸಿದರು.

ಜಿಎಸ್ಬಿ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಈ ವಿಧಿಯಲ್ಲಿ ಪಾಲ್ಗೊಂಡರು. ಪಿತೃಪಕ್ಷದಲ್ಲಿ ಮಹಾಲಯ ಅಮವಾಸ್ಯೆ ಬಂದಿರುವುದು ಮತ್ತೊಂದು ವಿಶೇಷ. ಹೀಗಾಗಿ ಶ್ರಾದ್ಧ ಮಾಡಲು ಅನಾನುಕೂಲ ಆದವರು ಇಂದು ತರ್ಪಣ ಬಿಟ್ಟರೆ ಅಗಲಿದ ಆತ್ಮಗಳಿಗೆ ದ್ಗತಿ ಸಿಗುತ್ತದೆ ಎಂಬ ನಂಬಿಕೆಯಿದೆ.

ಜಿಎಸ್ಬಿ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಈ ವಿಧಿಯಲ್ಲಿ ಪಾಲ್ಗೊಂಡರು. ಪಿತೃಪಕ್ಷದಲ್ಲಿ ಮಹಾಲಯ ಅಮವಾಸ್ಯೆ ಬಂದಿರುವುದು ಮತ್ತೊಂದು ವಿಶೇಷ. ಹೀಗಾಗಿ ಶ್ರಾದ್ಧ ಮಾಡಲು ಅನಾನುಕೂಲ ಆದವರು ಇಂದು ತರ್ಪಣ ಬಿಟ್ಟರೆ ಅಗಲಿದ ಆತ್ಮಗಳಿಗೆ ಸದ್ಗತಿ ಸಿಗುತ್ತದೆ ಎಂಬ ನಂಬಿಕೆಯಿದೆ. ಇಂದು ಬೆಳಗ್ಗೆಯಿಂದಲೇ ಈ ವಿಧಿಯಲ್ಲಿ ಜನರು ಪಾಲ್ಗೊಂಡರು. ಆದರೆ ಹಿಂದಿನ ವರ್ಷಗಳಿಗೆ ಹೋಲಿಸಿದರೆ, ಕೊರೋನ ಹಿನ್ನೆಲೆಯಲ್ಲಿ ಭಕ್ತರ ಸಂಖ್ಯೆ ಕಡಿಮೆಯಿತ್ತು ಎಂಬುದು ಸ್ಥಳೀಯರ ಅಭಿಪ್ರಾಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News