ಉಡುಪಿ: ಕೊರೋನ ಸೋಂಕಿಗೆ ಜಿಲ್ಲೆಯಲ್ಲಿ ನಾಲ್ವರು ಬಲಿ, ನಾಲ್ಕು ದಿನಗಳಲ್ಲಿ 864 ಮಂದಿ ಆಸ್ಪತ್ರೆಯಿಂದ ಬಿಡುಗಡೆ

Update: 2020-09-17 15:09 GMT

ಉಡುಪಿ, ಸೆ.17: ಕರ್ನಾಟಕ ಸರಕಾರಿ ವೈದ್ಯಾಧಿಕಾರಿಗಳ ಸಂಘದ ಕರೆ ಯಂತೆ ಸತತ ನಾಲ್ಕನೇ ದಿನವೂ ಜಿಲ್ಲೆಯ ಸರಕಾರಿ ವೈದ್ಯಾಧಿಕಾರಿ ಗಳು ಆನ್‌ಲೈನ್ ಸಹಿತ ಕೆಲವು ಸರಕಾರಿ ಸೇವೆಗಳಿಂದ ದೂರು ಉಳಿದ ಹಿನ್ನೆಲೆಯಲ್ಲಿ ಜಿಲ್ಲೆಯ ದೈನಂದಿನ ಕೋವಿಡ್ ವರದಿ ಇಂದೂ ಸಹ ಅಧಿಕೃತವಾಗಿ ಪ್ರಕಟ ಗೊಂಡಿಲ್ಲ.

ವೈದ್ಯಾಧಿಕಾರಿಗಳ ಮುಷ್ಕರ ಇಂದು ಸಹ ಮುಂದುವರಿದಿದೆ. ನಾಳೆ ಬೆಂಗಳೂರಿನಲ್ಲಿ ಸಂಘದ ಪ್ರತಿನಿಧಿಗಳು ಹಾಗೂ ಸಚಿವರೊಂದಿಗೆ ಮಾತುಕತೆ ನಡೆಯಲಿದ್ದು, ಬಳಿಕ ಅಂತಿಮ ನಿರ್ಧಾರ ಪ್ರಕಟಗೊಳ್ಳಲಿದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ಇಂದು ಸಂಜೆ ತಿಳಿಸಿದೆ.

ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂದು ಸಂಜೆ ರಾಜ್ಯದ ಎಲ್ಲಾ ಜಿಲ್ಲೆಗಳ ಇಂದಿನ ಅಂಕಿಅಂಶಗಳನ್ನು ಪ್ರಕಟಿಸಿದ್ದು, ಇದರಲ್ಲಿ ಉಡುಪಿ ಜಿಲ್ಲೆಯಲ್ಲಿ ಇಂದಿನ ಪಾಸಿಟಿವ್ ಪ್ರಕರಣ 120 ಎಂದು ನಮೂದಿಸಿದ್ದು, ದಿನದಲ್ಲಿ ಕೊರೋನ ಸೋಂಕಿನಿಂದ ನಾಲ್ವರು ಮೃತರಾಗಿರುವುದಾಗಿ ತಿಳಿಸಿದೆ.

ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂದು ಸಂಜೆ ರಾಜ್ಯದ ಎಲ್ಲಾ ಜಿಲ್ಲೆಗಳ ಇಂದಿನ ಅಂಕಿಅಂಶಗಳನ್ನು ಪ್ರಕಟಿಸಿದ್ದು, ಇದರಲ್ಲಿ ಉಡುಪಿ ಜಿಲ್ಲೆಯಲ್ಲಿ ಇಂದಿನ ಪಾಸಿಟಿವ್ ಪ್ರಕರಣ 120 ಎಂದು ನಮೂದಿಸಿದ್ದು, ದಿನದಲ್ಲಿ ಕೊರೋನ ಸೋಂಕಿನಿಂದ ನಾಲ್ವರು ಮೃತರಾಗಿ ರುವುದಾಗಿ ತಿಳಿಸಿದೆ. ಜಿಲ್ಲಾ ಆರೋಗ್ಯ ಇಲಾಖೆಯ ಉನ್ನತ ಮೂಲ ತಿಳಿಸಿದಂತೆ ಕಳೆದ ನಾಲ್ಕು ದಿನಗಳಲ್ಲಿ (ಸೆ.14ರಿಂದ) ಉಡುಪಿ ಜಿಲ್ಲೆಯಲ್ಲಿ ಒಟ್ಟು 343 ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಇದರಿಂದ ಈವರೆಗೆ ಜಿಲ್ಲೆಯಲ್ಲಿ ಕೋವಿಡ್‌ಗೆ ಪಾಸಿಟಿವ್ ಬಂದವರ ಸಂಖ್ಯೆ 14,379ಕ್ಕೇರಿದೆ. ಕಳೆದ ನಾಲ್ಕು ದಿನಗಳಲ್ಲಿ ಜಿಲ್ಲೆಯಲ್ಲಿ 864 ಮಂದಿ ಚಿಕಿತ್ಸೆಯ ಬಳಿಕ ಗುಣಮುಖರಾಗಿ ಆಸ್ಪತ್ರೆ ಹಾಗೂ ಮನೆಯ ಐಸೋಲೇಷನ್‌ನಿಂದ ಬಿಡುಗಡೆಗೊಂಡಿದ್ದಾರೆ.

ಜಿಲ್ಲೆಯಲ್ಲೀಗ ಇರುವ ಸಕ್ರೀಯ ಪ್ರಕರಣಗಳ ಸಂಖ್ಯೆ 1206 ಆಗಿದೆ. ಕಳೆದ ನಾಲ್ಕು ದಿನಗಳಿಂದ ಜಿಲ್ಲೆಯಲ್ಲಿ ನಾಲ್ವರು ಮೃತಪಟ್ಟಿದ್ದು, ಇದರಿಂದ ಕೋವಿಡ್‌ಗೆ ಜಿಲ್ಲೆಯಲ್ಲಿ ಬಲಿಯಾದವರ ಸಂಖ್ಯೆ 134ಕ್ಕೇರಿದೆ. ಕಾರ್ಕಳದ ಮೂವರು ಹಾಗೂ ಉಡುಪಿ ತಾಲೂಕಿನ ಒಬ್ಬರು ಮೃತರಲ್ಲಿ ಸೇರಿದ್ದಾರೆ.

ಅನ್ಯ ಸಮಸ್ಯೆಗಳ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾದ 93, 56, 73 ಹಾಗೂ 66 ವರ್ಷ ಪ್ರಾಯದ ಹಿರಿಯ ನಾಗರಿಕರು ಕೋವಿಡ್ ಸೋಂಕಿನೊಂದಿಗೆ ಚಿಕಿತ್ಸೆಗೆ ಸ್ಪಂಧಿಸದೇ ಮೃತಪಟ್ಟಿದ್ದಾರೆ ಎಂದು ಇಲಾಖಾ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News