ಬ್ಯಾರಿ ಭಾಷಾ ದಿನಾಚರಣೆ: ವಿವಿಧ ಸ್ಪರ್ಧೆ ಆಯೋಜನೆ

Update: 2020-09-17 16:11 GMT

ಮಂಗಳೂರು, ಸೆ.17: ಅಖಿಲ ಭಾರತ ಬ್ಯಾರಿ ಪರಿಷತ್ ಮಂಗಳೂರು ವತಿಯಿಂದ ಆಚರಿಸುವ ‘ಬ್ಯಾರಿ ಭಾಷಾ ದಿನಾಚರಣೆ ಪ್ರಯುಕ್ತ ಬ್ಯಾರಿ ಭಾಷೆಯ ವಿವಿಧ ಸ್ಪರ್ಧೆಗಳನ್ನು ಸೆ.22ರಿಂದ ಆಯೋಜಿಸಲಾಗಿದೆ.

ಅರ್ಹ ಸ್ಪರ್ಧಿಗಳು ಬ್ಯಾರಿ ಭಾಷಾ ಸ್ಪರ್ಧೆಗಳಲ್ಲಿ ಭಾಗವಹಿಸುವಂತೆ ಕೋರಲಾಗಿದೆ. ಪ್ರತಿ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಮೊದಲನೇ ಬಹುಮಾನ 1,000 ರೂ., ಎರಡನೇ ಬಹುಮಾನ 500 ರೂ. ಹಾಗೂ ಮೂರನೇ ಬಹುಮಾನ 300 ರೂ.ನ್ನು ನೀಡಲಾಗುವುದು.

ಬ್ಯಾರಿ ಕ್ವಿಝ್ ಸ್ಪರ್ಧೆ: ಮಂಗಳೂರು ನಗರದ ಸ್ಟೇಟ್‌ಬ್ಯಾಂಕ್‌ನ ಹ್ಯಾಮಿಲ್ಟರ್ ಸರ್ಕಲ್ ಸಮೀಪದ ಅಖಲ ಭಾರತ ಬ್ಯಾರಿ ಪರಿಷತ್ ಕೇಂದ್ರ ಕಚೇರಿಯಲ್ಲಿ ಸೆ.22ರಂದು ಬೆಳಗ್ಗೆ 10 ಗಂಟೆಗೆ ಬ್ಯಾರಿ ಕ್ವಿಝ್ ಸ್ಪರ್ಧೆ ನಡೆಯಲಿದೆ. ಬ್ಯಾರಿ ಭಾಷೆ ಗೊತ್ತಿರುವ ಸಾರ್ವಜನಿಕರು ಇದರಲ್ಲಿ ಭಾಗವಹಿಸಬಹುದಾಗಿದೆ.

ಆಶುಭಾಷಣ ಸ್ಪರ್ಧೆ: ನಗರದ ನೆಲ್ಲಿಕಾಯಿ ರಸ್ತೆಯ ಪಯೊನೀರ್ ಕಾಂಪ್ಲೆಕ್ಸ್‌ನ 2ನೇ ಮಹಡಿಯಲ್ಲಿನ ನ್ಯಾಶನಲ್ ಟ್ಯುಟೋರಿಯಲ್ ಸಭಾಂಗಣದಲ್ಲಿ ಸೆ.26ರಂದು ಬೆಳಗ್ಗೆ 10:30ಕ್ಕೆ ಆಶುಭಾಷಣ ಸ್ಪರ್ಧೆ ಆರಂಭವಾಗಲಿದೆ. ಇಲ್ಲಿ ಪ್ರತೀ ಸ್ಪರ್ಧಿಗಳಿಗೆ ಮೂರು ನಿಮಿಷಗಳ ಅವಕಾಶ ಕಲ್ಪಿಸಲಾಗಿದೆ. ಇದರಲ್ಲಿ ಬ್ಯಾರಿ ಭಾಷೆ ಗೊತ್ತಿರುವ ಸಾರ್ವಜನಿಕರು ಭಾಗವಹಿಸಲು ಅವಕಾಶವಿದೆ.

ಪ್ರಬಂಧ ಸ್ಪರ್ಧೆ: ನ್ಯಾಶನಲ್ ಟ್ಯುಟೋರಿಯಲ್ ಸಭಾಂಗಣದಲ್ಲಿ ಸೆ.29ರಂದು ಬೆಳಗ್ಗೆ 10:30ರಿಂದ 11:30ರವರೆಗೆ ಪ್ರಬಂಧ ಸ್ಪರ್ಧೆ ನಡೆಯಲಿದೆ. ‘ಮುನೊಲುಗು ಪಡಿಪು ಎಙನೆ ಇಕ್ಕೊನು?’ (ಭವಿಷ್ಯದಲ್ಲಿ ಶಿಕ್ಷಣ ಹೇಗಿರಬೇಕು) ಎಂಬ ವಿಷಯದಲ್ಲಿ ಪ್ರಬಂಧ ಸ್ಪರ್ಧೆ ಏರ್ಪಡಿಸ ಲಾಗಿದೆ. ಎಸೆಸೆಲ್ಸಿ, ಪಿಯುಸಿ ವಿದ್ಯಾರ್ಥಿಗಳು ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ.

ಬ್ಯಾರಿ ಕಾವ್ಯ ವಾಚನ ಸ್ಪರ್ಧೆ: ನಗರದ ಸ್ಟೇಟ್‌ಬ್ಯಾಂಕ್‌ನ ಹ್ಯಾಮಿಲ್ಟರ್ ಸರ್ಕಲ್ ಸಮೀಪದ ಅಖಲ ಭಾರತ ಬ್ಯಾರಿ ಪರಿಷತ್ ಕೇಂದ್ರ ಕಚೇರಿಯಲ್ಲಿ ಸೆ.30ರಂದು ಬೆಳಗ್ಗೆ 10 ಗಂಟೆಗೆ ಬ್ಯಾರಿ ಕಾವ್ಯ ವಾಚನ ಸ್ಪರ್ಧೆ ನಡೆಯಲಿದೆ. ಇದರಲ್ಲಿ ಬ್ಯಾರಿ ಸಾಹಿತಿಗಳು, ಕವಿಗಳು, ಬ್ಯಾರಿ ಕಾವ್ಯ ವಾಚನದಲ್ಲಿ ಆಸಕ್ತಿ ಇರುವ ಸಾರ್ವಜನಿಕರು ಭಾಗವಹಿಸಲು ಅವಕಾಶವಿದೆ. ಎಲ್ಲ ಸ್ಪರ್ಧೆಗಳೂ ಬ್ಯಾರಿ ಭಾಷೆಯಲ್ಲಿ ಜರುಗಲಿವೆ.

ಆಸಕ್ತರು ಸ್ಪರ್ಧೆಯ ಒಂದು ದಿನಕ್ಕಿಂತ ಮುಂಚಿತವಾಗಿ 9008503993, 9845499527 ಅಥವಾ 9343563717 ನಂಬರ್‌ಗಳಿಗೆ ವಾಟ್ಸ್‌ಆ್ಯಪ್ ಸಂದೇಶ ಕಳುಹಿಸಿ ನಿಗದಿತ ಸಮಯದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಬಹುದು. ಬಹುಮಾನ ವಿತರಣೆಯನ್ನು ಅಕ್ಟೋಬರ್ 3ರಂದು ಹೊಟೇಲ್ ಶ್ರೀನಿವಾಸ್ ಸಭಾಂಗಣದಲ್ಲಿ ಜರುಗುವ ಬ್ಯಾರಿ ಭಾಷಾ ದಿನಾಚರಣೆಯಂದು ವಿತರಿಸಲಾಗುತ್ತದೆ ಎಂದು ಅಖಿಲ ಭಾರತ ಬ್ಯಾರಿ ಪರಿಷತ್‌ನ ಅಧ್ಯಕ್ಷ ಬಿ.ಎ. ಮುಹಮ್ಮದ್ ಹನೀಫ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News